ಮಾರುಕಟ್ಟೆಯಲ್ಲಿ ದೊರೆಯುವ ಬ್ರೆಡ್‌ಗಳಲ್ಲಿ ಆಹಾರ ಬಣ್ಣ, ಸಂರಕ್ಷಣಾ ಪದಾರ್ಥಗಳು, ರಿಫೈನ್ಡ್ ಎಣ್ಣೆ ಮತ್ತು ರಾಸಾಯನಿಕಗಳ ಬಳಕೆ ಸಾಮಾನ್ಯವಾಗಿದೆ. ಇವು ದೀರ್ಘಕಾಲ ಬಳಸಿದರೆ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ತಾಜಾ, ಮೃದುವಾದ ಮತ್ತು ಈಸ್ಟ್ ಇಲ್ಲದ ಬ್ರೆಡ್ ತಯಾರಿಸಬಹುದಾದ ಒಂದು ಸುಲಭ ಪಾಕವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
2 ಕಪ್ ಮೈದಾ ಹಿಟ್ಟು
1 ಕಪ್ ಹಾಲು
1/4 ಕಪ್ ಎಣ್ಣೆ ಅಥವಾ ಬೆಣ್ಣೆ
1 ಟೀಸ್ಪೂನ್ ಬೇಕಿಂಗ್ ಪೌಡರ್
1/2 ಟೀಸ್ಪೂನ್ ಅಡಿಗೆ ಸೋಡಾ
1 ಟೀಸ್ಪೂನ್ ಸಕ್ಕರೆ
1/2 ಟೀಸ್ಪೂನ್ ಉಪ್ಪು
1 ಚಮಚ ಮೊಸರು.
ಮಾಡುವ ವಿಧಾನ :
ಮೊದಲು ಒಂದು ದೊಡ್ಡ ಬಟ್ಟಲಿನಲ್ಲಿ ಹಿಟ್ಟು, ಬೇಕಿಂಗ್ ಪೌಡರ್, ಅಡಿಗೆ ಸೋಡಾ, ಸಕ್ಕರೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಅದಕ್ಕೆ ಹಾಲು, ಎಣ್ಣೆ ಅಥವಾ ಬೆಣ್ಣೆ ಮತ್ತು ಮೊಸರು ಹಾಕಿ ಸ್ಮೂತ್ ಆಗಿರುವ ಮಿಶ್ರಣ ತಯಾರಿಸಬೇಕು.
ಈ ಮಿಶ್ರಣ ದಪ್ಪವಾಗಿರಬಾರದು ಮೃದುವಾಗಿರಬೇಕು. ಈ ಮಿಶ್ರಣವನ್ನು ಎಣ್ಣೆ ಹಚ್ಚಿದ ಬೇಕಿಂಗ್ ಟಿನ್ ಅಥವಾ ಕೇಕ್ ಅಚ್ಚಿಗೆ ಹಾಕಿ ಸಮವಾಗಿ ಹರಡಿ. ಕುಕ್ಕರ್‌ನ್ನು ಮೊದಲೇ ಪ್ರಿಹೀಟ್ ಗೊಳಿಸಿ. ಅದರಲ್ಲಿ ಈ ಟಿನ್ ಅನ್ನು 25-30 ನಿಮಿಷಗಳವರೆಗೆ ಗೋಲ್ಡನ್ ಬಣ್ಣ ಬರುವವರೆಗೆ ಬೇಯಿಸಬೇಕು.
ತಣ್ಣಗಾದನಂತರ ಇದನ್ನು ತುಂಡರಿಸಿಕೊಂಡು ಸವಿಯಿರಿ.