ಸಾಮಾನ್ಯ ಕಡಲೆಕಾಳು ಮಸಾಲೆಗೆ ಒಂದು ರಿಚ್ ಟ್ವಿಸ್ಟ್ ಕೊಟ್ಟರೆ ಅದು ಮಲಾಯ್ ಚನ್ನಾ ಮಸಾಲಾ ಆಗುತ್ತದೆ. ನಾವು ಬಳಸೋ ಫ್ರೆಶ್ ಕ್ರೀಮ್ ಈ ಡಿಶ್‌ಗೆ ವಿಶಿಷ್ಟ ರುಚಿ ಕೊಡುತ್ತದೆ. ಹಬ್ಬದ ಊಟವಾಗಲಿ ಅಥವಾ ವೀಕೆಂಡ್ ಸ್ಪೆಷಲ್ ಆಗಲಿ, ರೋಟಿ ಅಥವಾ ನಾನ್ ಜೊತೆ ಈ ಕ್ರೀಮಿ ಮಲಾಯಿ ಚನ್ನಾ ಮಸಾಲಾ ಮನೆಯಲ್ಲೇ ರೆಸ್ಟೋರೆಂಟ್ ಫೀಲಿಂಗ್ ಕೊಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಕಾಬುಲ್ ಕಡಲೆ – 1 ಕಪ್ (ರಾತ್ರಿ ನೆನೆಸಿ ಬೇಯಿಸಿದ್ದು)
ಎಣ್ಣೆ / ಬೆಣ್ಣೆ – 2 ಟೇಬಲ್ ಸ್ಪೂನ್
ಈರುಳ್ಳಿ – 2
ಟೊಮೇಟೊ ಪ್ಯೂರಿ – 2 ಮಧ್ಯಮ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಅರಿಶಿನ ಪುಡಿ – ¼ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಜೀರಿಗೆ ಪುಡಿ – ½ ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಫ್ರೆಶ್ ಮಲಾಯ್ (ಫ್ರೆಶ್ ಕ್ರೀಮ್) – ½ ಕಪ್
ಕಸೂರಿ ಮೇಥಿ – 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲು ಒಂದು ಪ್ಯಾನ್‌ನಲ್ಲಿ ಎಣ್ಣೆ ಅಥವಾ ಬೆಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ. ಜೀರಿಗೆ ಚಟಚಟ ಅಂತ ಶಬ್ದ ಮಾಡಿದ ನಂತರ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.
ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಬೇಕು. ನಂತರ ಟೊಮೇಟೊ ಪ್ಯೂರಿ ಹಾಕಿ, ಎಣ್ಣೆ ಬೇರ್ಪಡುವವರೆಗೆ ಚೆನ್ನಾಗಿ ಬೇಯಿಸಿ. ಈ ಹಂತದಲ್ಲಿ ಅರಿಶಿನ, ಕೆಂಪು ಮೆಣಸು, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಮಸಾಲೆ ಚೆನ್ನಾಗಿ ಬೆರೆಸಿಕೊಳ್ಳಿ.
ಬೇಯಿಸಿದ ಕಡಲೆಕಾಳುಗಳನ್ನು ಹಾಕಿ, ಸ್ವಲ್ಪ ನೀರು ಸೇರಿಸಿ 5–7 ನಿಮಿಷ ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ.
ಇದಾದ ನಂತರ ಗ್ಯಾಸ್ ಲೋ ಮಾಡಿ ಫ್ರೆಶ್ ಮಲಾಯ್ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ಗರಂ ಮಸಾಲಾ ಮತ್ತು ಕಸೂರಿ ಮೇಥಿ ಹಾಕಿ 2 ನಿಮಿಷ ಕುದಿಸಿದರೆ ಗ್ರೇವಿ ಕ್ರೀಮಿ ಆಗುತ್ತದೆ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿ.



