January16, 2026
Friday, January 16, 2026
spot_img

FOOD | ಮಕ್ಕಳಿಗೆ ಸಖತ್ ಇಷ್ಟವಾಗೋ ಕ್ಯಾರೆಟ್ ಕೇಕ್ ಟ್ರೈ ಮಾಡಿ

ಕೇಕ್ ಅಂದ್ರೆ ಮಕ್ಕಳಿಂದ ಹಿಡಿದು ವಯಸ್ಕರಿಗೂ ಇಷ್ಟವಾದ ಸಿಹಿ ತಿನಿಸು. ಆದರೆ ಕೇಕ್ ಅಂದ್ರೆ ಕೇವಲ ಸಿಹಿ ಅಷ್ಟೇ ಅಲ್ಲ, ಅದರಲ್ಲಿ ಆರೋಗ್ಯವೂ ಇರಬಹುದು ಅಂದರೆ ನಂಬುತ್ತೀರಾ? ಹೌದು! ಕ್ಯಾರೆಟ್ ಕೇಕ್ ಅಂದರೆ ಅದೇ ರೀತಿಯ ಸ್ಪೆಷಲ್ ರೆಸಿಪಿ.

ಬೇಕಾಗುವ ಪದಾರ್ಥಗಳು:

ತುರಿದ ಕ್ಯಾರೆಟ್ – 1 ಕಪ್
ಮೈದಾ ಹಿಟ್ಟು – 1 ಕಪ್
ಸಕ್ಕರೆ – ¾ ಕಪ್
ಬೇಕಿಂಗ್ ಪೌಡರ್ – 1 ಟೀ ಸ್ಪೂನ್
ಬೇಕಿಂಗ್ ಸೋಡಾ – ¼ ಟೀ ಸ್ಪೂನ್
ಎಣ್ಣೆ – ½ ಕಪ್
ಮೊಸರು ಅಥವಾ ಹಾಲು – ½ ಕಪ್
ದಾಲ್ಚಿನ್ನಿ ಪುಡಿ – ¼ ಟೀ ಸ್ಪೂನ್ (ಐಚ್ಛಿಕ)
ಉಪ್ಪು – ಚಿಟಿಕೆ
ಗೋಡಂಬಿ – ಸ್ವಲ್ಪ
ವಿನಿಲ್ಲಾ ಎಸೆನ್ಸ್ – 1 ಟೀ ಸ್ಪೂನ್

ಮಾಡುವ ವಿಧಾನ:

ಮೊದಲಿಗೆ ಓವನ್ ಅನ್ನು 180°C ಗೆ ಪ್ರೀಹೀಟ್ ಮಾಡಿ. ಕೇಕ್ ಪ್ಯಾನ್‌ಗೆ ಎಣ್ಣೆ ಹಚ್ಚಿ, ಮೈದಾ ಹರಡಿ.

ಒಂದು ಬೌಲ್‌ನಲ್ಲಿ ಮೈದಾ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ದಾಲ್ಚಿನ್ನಿ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಇನ್ನೊಂದು ಬೌಲ್‌ನಲ್ಲಿ ಎಣ್ಣೆ, ಸಕ್ಕರೆ, ಮೊಸರು (ಅಥವಾ ಹಾಲು), ವಿನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಬೀಟ್ ಮಾಡಿ.

ಈಗ ಒಣ ಮಿಶ್ರಣವನ್ನು ಈ ದ್ರವ ಮಿಶ್ರಣಕ್ಕೆ ಸೇರಿಸಿ, ಸಾಫ್ಟ್ ಬ್ಯಾಟರ್ ಆಗುವವರೆಗೆ ಮಿಶ್ರಣ ಮಾಡಿ. ಈಗ ತುರಿದ ಕ್ಯಾರೆಟ್ ಮತ್ತು ಗೋಡಂಬಿ ತುಂಡುಗಳನ್ನು ಸೇರಿಸಿ, ನಿಧಾನವಾಗಿ ಮಿಕ್ಸ್ ಮಾಡಿ.

ಬ್ಯಾಟರ್ ಅನ್ನು ಪ್ಯಾನ್‌ಗೆ ಹಾಕಿ ಓವನ್‌ನಲ್ಲಿ 30–35 ನಿಮಿಷ ಬೇಯಿಸಿ. (ಮಧ್ಯದಲ್ಲಿ ಟೂತ್‌ಪಿಕ್ ಚುಚ್ಚಿ ಪರಿಶೀಲಿಸಿ, ಅದು ಸ್ವಚ್ಛವಾಗಿ ಹೊರಬಂದರೆ ಕೇಕ್ ಸಿದ್ಧ.) ಕೇಕ್ ತಣ್ಣಗಾದ ನಂತರ ತುಂಡುಗಳಾಗಿ ಕತ್ತರಿಸಿ ಸರ್ವ್ ಮಾಡಿ.

Must Read

error: Content is protected !!