ದಕ್ಷಿಣ ಭಾರತದ ಆಹಾರ ಸಾಂಬಾರ್ ಇಲ್ಲದೆ ಪೂರ್ಣಗೊಳ್ಳೋದೇ ಇಲ್ಲ. ಅನ್ನ, ಇಡ್ಲಿ, ದೋಸೆ ಯಾವೆಲ್ಲಾ ತಿನಿಸುಗಳ ಜೊತೆಗೆ ಇದನ್ನು ಸೇವಿಸಬಹುದು. ಇವತ್ತು ಸುಲಭವಾಗಿ ಮನೆಯಲ್ಲಿ ಸಾಂಬಾರ್ ತಯಾರಿಸಬಹುದಾದ ವಿಧಾನ ಇಲ್ಲಿದೆ ನೋಡಿ
ಬೇಕಾಗುವ ಪದಾರ್ಥಗಳು:
1/3 ಕಪ್ ತೊಗರಿ ಬೇಳೆ
1/4 ಟೀಸ್ಪೂನ್ ಅರಿಶಿನ ಪುಡಿ
1 ಕಪ್ ಕತ್ತರಿಸಿದ ಮಿಶ್ರ ತರಕಾರಿಗಳು
1/2 ಟೀಸ್ಪೂನ್ ಸಾಸಿವೆ
5-6 ಕರಿಬೇವು
1-2 ಒಣ ಮೆಣಸಿನಕಾಯಿಗಳು
ಒಂದು ಚಿಟಿಕೆ ಅಸಾಫೋಟಿಡಾ
1 ಈರುಳ್ಳಿ, ಸಣ್ಣಗೆ ಹೆಚ್ಚಿದ
1 ಚಮಚ ಸಾಂಬಾರ್ ಪುಡಿ
1/2 ಚಮಚ ಹುಣಸೆಹಣ್ಣು
1 ಟೊಮೆಟೊ
1 ಚಮಚ ಎಣ್ಣೆ
1 ಕಪ್ + 1½ ಕಪ್ ನೀರು
1 ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲು 1/3 ಕಪ್ ತೊಗರಿ ಬೇಳೆ, ಅರ್ಧ ಟೀಸ್ಪೂನ್ ಅರಿಶಿನ ಪುಡಿ ಹಾಗೂ 1 ಕಪ್ ನೀರಿನೊಂದಿಗೆ ಪ್ರೆಶರ್ ಕುಕ್ಕರ್ನಲ್ಲಿ ಬೇಯಿಸಬೇಕು. ಈ ವೇಳೆ ಬೇರೆ ಒಂದು ಪಾತ್ರೆಯಲ್ಲಿ ನಿಮ್ಮ ಇಷ್ಟದ ತರಕಾರಿಗಳನ್ನು – ಹೂಕೋಸು, ಬದನೆಕಾಯಿ, ಕ್ಯಾರೆಟ್, ಬೀನ್ಸ್ ಮೊದಲಾದವುಗಳನ್ನು ತಯಾರಿಸಿ ಅದನ್ನು ಕುಕ್ಕರ್ನೊಳಗೆ ಇಡಬಹುದು. ಇದರಿಂದ ಎಲ್ಲ ತರಕಾರಿ ಹಾಗೂ ಬೇಳೆ ಒಟ್ಟಿಗೆ ಬೇಯುತ್ತದೆ. ಮಧ್ಯಮ ಉರಿಯಲ್ಲಿ 3-4 ಸೀಟಿಗೆ ಬೇಯಿಸಿದ ನಂತರ, ಬೇಳೆಯನ್ನು ಚೆನ್ನಾಗಿ ಮ್ಯಾಶ್ ಮಾಡಬೇಕು.
ಇನ್ನೊಂದು ಬಾಣಲೆಯಲ್ಲಿ ಸಾಸಿವೆ, ಕರಿಬೇವು, ಒಣ ಮೆಣಸು ಮತ್ತು ಇಂಗು ಹಾಕಿ ಒಗ್ಗರಣೆ ತಯಾರಿಸಿ, ಅದಕ್ಕೆ ಈರುಳ್ಳಿ ಹಾಕಿ ಹುರಿಯಬೇಕು. ಬಳಿಕ ಟೊಮೆಟೊ ಸೇರಿಸಿ ಜೊತೆಗೆ ಸಾಂಬಾರ್ ಪುಡಿ, ಸೋಸಿದ ಹುಣಸೆ ರಸ ಸೇರಿಸಿ 2-3 ನಿಮಿಷಗಳಷ್ಟು ಮೃದುವಾಗುವವರೆಗೆ ಬೇಯಿಸಬೇಕು.
ಕೊನೆಯದಾಗಿ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ಸೂಪರ್ ಸಾಂಬಾರ್ ತಯಾರಾಗುತ್ತದೆ.