ದಮ್ ಆಲೂ ಕಾಶ್ಮೀರಿ ಪಾಕಪದ್ಧತಿಯಲ್ಲಿ ಬಹಳ ಪ್ರಸಿದ್ಧವಾಗಿದೆ. ಇದು ಸಾಮಾನ್ಯವಾಗಿ ಸಣ್ಣ ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಹುರಿದು, ಮಸಾಲೆಗಳ ಮಿಶ್ರಣದಲ್ಲಿ ಬಹಳ ಕಡಿಮೆ ಉರಿಯಲ್ಲಿ ಬೇಯಿಸುವುದರಿಂದ ಇದರ ರುಚಿ ಅದ್ಭುತವಾಗಿರುತ್ತದೆ. ಇದನ್ನು ಅನ್ನ ಅಥವಾ ನಾನ್ ಜೊತೆಗೆ ಸವಿಯಬಹುದಾಗಿದೆ.
ಬೇಕಾಗುವ ಪದಾರ್ಥಗಳು:
ಸಣ್ಣ ಆಲೂಗಡ್ಡೆ (ಬೇಬಿ ಆಲೂಗಡ್ಡೆ,)
ಸಂಪೂರ್ಣ ಗರಂ ಮಸಾಲ (ಇದರಲ್ಲಿ 1 ಬೇ ಎಲೆ, 2 ಲವಂಗ, 1” ದಾಲ್ಚಿನ್ನಿ ಕಡ್ಡಿ, 1 ಏಲಕ್ಕಿ ಸೇರಿವೆ)
ಜೀರಿಗೆ – 1/2 ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – 1/2 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1/2
ಶುಂಠಿ ಪುಡಿ – 1/4 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಗರಂ ಮಸಾಲ ಪುಡಿ – 1/2 ಟೀಸ್ಪೂನ್
ಮೊಸರು – 1 ಕಪ್
ಹಾಲು – 1/2 ಕಪ್
ಗೋಡಂಬಿ – 8-10 ಪುಡಿ ಮಾಡಿದ್ದು
ಎಣ್ಣೆ – 2 ಟೀಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
ನೀರು 1/2 ಕಪ್
ಮಾಡುವ ವಿಧಾನ
ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಅರ್ಧ ಭಾಗಗಳಾಗಿ ಕತ್ತರಿಸಿ. ಅರ್ಧ ಆಲೂಗಡ್ಡೆಯ ಉದ್ದಕ್ಕೂ ಫೋರ್ಕ್ ನಿಂದ ಚುಚ್ಚಿ ಪಕ್ಕಕ್ಕೆ ಇರಿಸಿ.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿಯಾದಾಗ ಸಂಪೂರ್ಣ ಗರಂ ಮಸಾಲ, ಜೀರಿಗೆ, ಶುಂಠಿ ಪುಡಿ ಸೇರಿಸಿ ಹುರಿಯಿರಿ. ಒಂದು ಕಪ್ ನಲ್ಲಿ ಕೆಂಪು ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಅರಿಶಿನ ಪುಡಿ, 2 ಚಮಚ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೇಯಿಸುತ್ತಿರುವ ಮಿಶ್ರಣಕ್ಕೆ ಇದನ್ನು ಸೇರಿಸಿ. ಜೊತೆಗೆ ಬೀಟ್ ಮಾಡಿದ ಮೊಸರನ್ನು ಬೇಯಿಸುತ್ತಿರುವ ಮಿಶ್ರಣಕ್ಕೆ ಸೇರಿಸಿ, ನಂತರ ಹಾಲು ಮತ್ತು 1/2 ಕಪ್ ನೀರು ಸೇರಿಸಿ ನಿಧಾನವಾದ ಉರಿಯಲ್ಲಿ ಬೇಯಿಸಿ.
ಈಗ ಅದಕ್ಕೆ ಆಲೂಗಡ್ಡೆ ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಮಸಾಲೆಗಳು ಚೆನ್ನಾಗಿ ಬೇಯುವವರೆಗೆ ನಿಧಾನವಾದ ಉರಿಯಲ್ಲಿ ಬೇಯಲು ಬಿಡಿ. ಕೊನೆಗೆ ಗೋಡಂಬಿ ಪುಡಿ ಹಾಕಿದರೆ ಕಾಶ್ಮೀರಿ ದಮ್ ಆಲೂ ರೆಡಿ.
ನಿಮಗೆ ಬೇಕಾದರೆ ಆಲೂಗಡ್ಡೆಗಳನ್ನು ಬೇಯಿಸುವ ಬದಲು ಎಣ್ಣೆಯಲ್ಲಿ ಹುರಿಯಬಹುದು. ನಿಮ್ಮ ಸವದಕ್ಕೆ ಅನುಸಾರವಾಗಿ ಬದಲಾಯಿಸಿಕೊಳ್ಳಿ.