ಬೇಸಿಗೆ ಕಾಲದಲ್ಲಿ ಸಿಹಿಯಾದ ತಂಪಾದ ತಿನಿಸುಗಳ ಆಸೆಯೆಲ್ಲಾ ಮಾವಿನ ಹಣ್ಣಿನ ಮೇಲೆ ಇರುತ್ತದೆ. ತಾಜಾ ಮಾವಿನ ಹಣ್ಣಿನ ರುಚಿಗೆ ಹಾಲು ಸೇರಿಸಿದರೆ, ಅದರಿಂದ ತಯಾರಾಗುವ ಮಾವಿನ ಕುಲ್ಫಿ ಒಂದು ಪರಿಪೂರ್ಣ ಡೆಸೆರ್ಟ್ ಆಗಿದೆ.
ಅವಶ್ಯಕವಾದ ಸಾಮಗ್ರಿಗಳು:
ಮಾವಿನ ಹಣ್ಣು – 2
ಹಾಲು – 2 ಕಪ್
ಕಂಡೆನ್ಸ್ ಮಿಲ್ಕ್ (Condensed milk) – ½ ಕಪ್
ಸಕ್ಕರೆ – 2 ಟೀ ಸ್ಪೂನ್
ಏಲಕ್ಕಿ ಪುಡಿ – ¼ ಟೀ ಸ್ಪೂನ್
ಕುಲ್ಫಿ ಮೌಲ್ಡ್ ಅಥವಾ ಪ್ಲಾಸ್ಟಿಕ್ ಕಪ್‌ಗಳು
ತಯಾರಿಸುವ ವಿಧಾನ:
ಮೊದಲು ಹಾಲನ್ನು ಒಂದು ಪ್ಯಾನ್ ಗೆ ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ. ಅದು ಅರ್ಧವಾಗುವವರೆಗೆ ಚೆನ್ನಾಗಿ ಕುದಿಸಿ. ಇದಕ್ಕೆ condensed milk ಸೇರಿಸಿ, ಸ್ವಲ್ಪ ಕಲಸಿ. ಬಳಿಕ ಎಲೆಕ್ಕಿ ಪುಡಿ ಹಾಕಿ. ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ.
ಇನ್ನೊಂದು ಬಟ್ಟಲಲ್ಲಿ ಮಾವಿನ ಪಲ್ಪ್ ತೆಗೆದು ಮಿಕ್ಸಿಯಲ್ಲಿ ಹಾಕಿ ಪ್ಯೂರಿ ಮಾಡಿ. ಹಾಲು ಮಿಶ್ರಣ ತಣ್ಣಗಾದ ನಂತರ, ಅದಕ್ಕೆ ಮಾವಿನ ಪಲ್ಪ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಕುಲ್ಫಿ ಮೌಲ್ಡ್ ಅಥವಾ ಪ್ಲಾಸ್ಟಿಕ್ ಕಪ್‌ಗಳಿಗೆ ಹಾಕಿ 6-8 ಗಂಟೆಗಳವರೆಗೆ ಫ್ರೀಜರ್ ನಲ್ಲಿಟ್ಟರೆ ಮಾವಿನ ಹಣ್ಣಿನ ಕುಲ್ಫಿ ರೆಡಿ.