FOOD | ಮಾವಿನ ಹಣ್ಣಿನ ಸೀಸನ್ ಮುಗಿಯೋ ಮುಂಚೆ ಈ ಮ್ಯಾಂಗೋ ರಸಗುಲ್ಲಾ ಟ್ರೈ ಮಾಡಿ!

ಮಾವಿನ ಹಣ್ಣಿನ ಸೀಸನ್‌ ಅಂದ್ರೆ ಸಿಹಿ ಪ್ರಿಯರಿಗೆ ಖುಷಿಯ ಸಮಯವಿದು. ಹಲವರಿಗೆ ಸಿಹಿ ಅಂದ್ರೆ ಪಂಚಪ್ರಾಣ. ದಿನವೂ ಒಂದು ಬಗೆಯ ತಿಂಡಿ ಅಥವಾ ಸಿಹಿ ಖಾದ್ಯ ಬೇಕೆನಿಸುತ್ತದೆ. ಈ ರೀತಿ ಸಿಹಿಗೆ ಇಷ್ಟಪಡುವವರು, ಮಾವಿನ ಹಣ್ಣಿನಿಂದ ತಯಾರಿಸಬಹುದಾದ ವಿಶೇಷವಾದ ಮ್ಯಾಂಗೋ ರಸಗುಲ್ಲಾ ರೆಸಿಪಿಯನ್ನು ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು:
ಮಾವಿನ ಹಣ್ಣು – ಮೂರು
ಹಾಲು – ಒಂದು ಲೀಟರ್
ಸಕ್ಕರೆ – ಒಂದು ಕಪ್
ನಿಂಬೆ ರಸ – 1 ಚಮಚ
ಕೆನೆ ತೆಗೆದ ಹಾಲು – 1 ಕಪ್
ಏಲಕ್ಕಿ ಪುಡಿ- ಅರ್ಧ ಚಮಚ
ಗೋಡಂಬಿ- 1 ಹಿಡಿ

ಮಾಡುವ ವಿಧಾನ:

ಮೊದಲು ಮೂರು ಮಾವಿನ ಹಣ್ಣುಗಳನ್ನು ಪ್ಯೂರಿ ಮಾಡಿಕೊಳ್ಳಿ. ನಂತರ ಅರ್ಧ ಲೀಟರ್ ಹಾಲನ್ನು ಈ ಪ್ಯೂರಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಕುದಿಸಿ. ನಂತರ ಹಾಲು ಒಡೆಯಲು 7-8 ಹನಿ ನಿಂಬೆ ರಸ ಹಾಕಿ.

ಆಮೇಲೆ ಈ ಈ ಒಡೆದ ಮಿಶ್ರಣವನ್ನು ಚೆನ್ನಾಗಿ ಸೋಸಿ, ಎಲ್ಲ ನೀರನ್ನು ತೆಗೆದುಹಾಕಿ. ನಂತರ ಈ ಮಿಶ್ರಣವನ್ನು ಮೃದುವಾಗುವವರೆಗೆ ಮಿಕ್ಸಿಯಲ್ಲಿ ರುಬ್ಬಿ, ಸಣ್ಣ ಉಂಡೆಗಳನ್ನು ಮಾಡಿ ಪಕ್ಕಕ್ಕೆ ಇರಿಸಿ.

ಸಕ್ಕರೆ ಹಾಗೂ ನೀರನ್ನು ಸೇರಿಸಿ ಶುಗರ್ ಸಿರಪ್ ತಯಾರಿಸಿ. ಸಕ್ಕರೆಯು ಕರಗಿದ ನಂತರ ತಯಾರಿಸಿದ ಉಂಡೆಗಳನ್ನು ಈ ಸಿರಪಿನಲ್ಲಿ ಹಾಕಿ ಸುಮಾರು 15-20 ನಿಮಿಷ ಕುದಿಸಿ. ಒಂದು ಪ್ಲೇಟ್ ನಲ್ಲಿ ಹಾಕಿಡಿ.

ಈಗ ಇನ್ನೊಂದು ಬಾಣಲೆಯಲ್ಲಿ ಹಾಲು ಹಾಕಿ ಕುದಿಸಿ, ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ. ಕೊನೆಗೆ ಮಾವಿನ ಪ್ಯೂರಿ ಸ್ವಲ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ತಯಾರಾದ ಈ ಹಾಲಿನ ಮಿಶ್ರಣವನ್ನು ರಸಗುಲ್ಲಾದ ಮೇಲೆ ಹಾಕಿ ತಣ್ಣಗೆ ಇದನ್ನು ಫ್ರಿಜ್‌ನಲ್ಲಿ ತಣ್ಣಗಾಗಲು ಇಟ್ಟರೆ ಮ್ಯಾಂಗೋ ರಸಗುಲ್ಲಾ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!