ಮಶ್ರೂಮ್ ಅಂದರೆ ಸಾಮಾನ್ಯವಾಗಿ ಗ್ರೇವಿ, ಮಸಾಲೆ, ಬಿರಿಯಾನಿ ಹೀಗೆ ಹಲವು ಖಾದ್ಯಗಳು ನೆನಪಾಗುತ್ತವೆ. ಆದರೆ ಮಶ್ರೂಮ್‌ನಿಂದ ತಯಾರಿಸುವ ಚಟ್ನಿ ಅಷ್ಟಾಗಿ ಜನಪ್ರಿಯವಾಗಿಲ್ಲ. ಈ ವಿಶೇಷ ಚಟ್ನಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ದೋಸೆ, ಇಡ್ಲಿ, ಅಕ್ಕಿ ರೊಟ್ಟಿ ಅಥವಾ ಯಾವ ತಿಂಡಿಗೂ ಈ ಮಶ್ರೂಮ್ ಚಟ್ನಿ ಅದ್ಭುತವಾಗಿ ಹೊಂದುತ್ತದೆ.
ಬೇಕಾಗುವ ಪದಾರ್ಥಗಳು
ಮಶ್ರೂಮ್ – 1 ಕಪ್
ಈರುಳ್ಳಿ – 1 (ಚೂರಿ ಕತ್ತರಿಸಿ)
ಒಣ ಮೆಣಸು – 4 ರಿಂದ 5
ಎಣ್ಣೆ – 2 ಟೀ ಸ್ಪೂನ್
ಬೆಳ್ಳುಳ್ಳಿ – 4 ಕಳಿ
ಶುಂಠಿ – 1 ಇಂಚು
ಹುಣಸೆ ಹಣ್ಣು – 1 ಚಿಕ್ಕ ತುಂಡು
ಉಪ್ಪು – ರುಚಿಗೆ ತಕ್ಕಷ್ಟು
ತೆಂಗಿನಕಾಯಿ ತುರಿ – ½ ಕಪ್
ಸಾಸಿವೆ – ½ ಟೀ ಸ್ಪೂನ್
ಕಡಲೆ ಹಿಟ್ಟು – 1 ಟೀ ಸ್ಪೂನ್
ಅರಿಶಿಣ ಪುಡಿ – ¼ ಟೀ ಸ್ಪೂನ್
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ತಯಾರಿಸುವ ವಿಧಾನ
ಮೊದಲು ಮಶ್ರೂಮ್‌ಗಳನ್ನು ಸ್ವಚ್ಛವಾಗಿ ತೊಳೆದು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ.
ಈಗ ಬಾಣಲೆಯಲ್ಲಿಗೆ ಎಣ್ಣೆ ಹಾಕಿ, ಅದರಲ್ಲಿ ಒಣ ಮೆಣಸು ಹಾಗೂ ಈರುಳ್ಳಿ ಹಾಕಿ ಹುರಿಯಿರಿ. ಈಗ ಅದಕ್ಕೆ ಮಶ್ರೂಮ್, ಬೆಳ್ಳುಳ್ಳಿ, ಶುಂಠಿ ಹಾಗೂ ಹುಣಸೆಹಣ್ಣು ಹಾಕಿ ಚೆನ್ನಾಗಿ ಫ್ರೈ ಮಾಡಿ. ಕೊನೆಯಲ್ಲಿ ಉಪ್ಪು ಸೇರಿಸಿ.
ಮಿಶ್ರಣ ತಣ್ಣಗಾದ ಬಳಿಕ ಮಿಕ್ಸಿಗೆ ಹಾಕಿ ತೆಂಗಿನಕಾಯಿ ಸೇರಿಸಿ ಮೃದುವಾಗಿ ರುಬ್ಬಿ ಚಟ್ನಿ ಮಾಡಿಕೊಳ್ಳಿ.
ಒಗ್ಗರಣೆಗೆ ಬಾಣಲೆಯಲ್ಲಿಗೆ ಸ್ವಲ್ಪ ಎಣ್ಣೆ ಹಾಕಿ, ಅದರಲ್ಲಿ ಸಾಸಿವೆ, ಕರಿಬೇವು, ಅರಿಶಿಣ, ಕಡಲೆ ಹಿಟ್ಟು ಹಾಕಿ ಹುರಿಯಿರಿ. ಈ ಒಗ್ಗರಣೆಯನ್ನು ತಯಾರಾದ ಚಟ್ನಿಗೆ ಹಾಕಿ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.