ರಾತ್ರಿಯ ಊಟ ಲೈಟ್ ಆಗಿರಬೇಕು ಜೊತೆಗೆ ಆರೋಗ್ಯಕರವಾಗಿರಬೇಕು ಅನ್ನೋರು ಈ ರಾಗಿ ಗಂಜಿ ಟ್ರೈ ಮಾಡಿ. ಇದನ್ನ ತಯಾರು ಮಾಡೋದಕ್ಕೆ ಕೇವಲ 15 ನಿಮಷ ಸಾಕು…
ಬೇಕಾಗುವ ಸಾಮಾಗ್ರಿಗಳು
1/4 ಕಪ್ ರಾಗಿ ಹಿಟ್ಟು
3/4 ಕಪ್ ಮೊಸರು
1 ಚಮಚ ತುಪ್ಪ
1 ಚಮಚ ಜೀರಿಗೆ
1/2 ಚಮಚ ಸಾಸಿವೆ
ಉಪ್ಪು ರುಚಿಗೆ ತಕ್ಕಷ್ಟು
500 ಮಿಲಿ ನೀರು
ಕರಿಬೇವಿನ ಎಲೆಗಳು/ಕೊತ್ತಂಬರಿ ಸೊಪ್ಪು
ಇಂಗು
ಮಾಡುವ ವಿಧಾನ
ಒಲೆಯ ಮೇಲೆ ಒಂದು ಪಾತ್ರೆಯನ್ನು ಇರಿಸಿ ಮತ್ತು ಅದರಲ್ಲಿ ನೀರನ್ನು ಹಾಕಿ. ನೀರು ಸ್ವಲ್ಪ ಬಿಸಿಯಾದ ನಂತರ, ರಾಗಿ ಹಿಟ್ಟನ್ನು ಅದಕ್ಕೆ ಸೇರಿಸಿ ಇದನ್ನು ದಪ್ಪವಾಗುವವರೆಗೆ ಕುದಿಸಿ. ಈಗ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಇದಕ್ಕೆ ಮೊಸರು ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಕಿದ್ದರೆ ಮತ್ತೆ ಸ್ವಲ್ಪ ನೀರು ಬೆರೆಸಿಕೊಳ್ಳಿ. ಇದಕ್ಕೆ ತುಪ್ಪ, ಜೀರಿಗೆ, ಸಾಸಿವೆ ಮತ್ತು ಕೊತ್ತಂಬರಿ ಸೊಪ್ಪನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರ ರಾಗಿ ಗಂಜಿ ಸವಿಯಲು ಸಿದ್ಧ.