ಬೆಳಗಿನ ಉಪಹಾರಕ್ಕಾಗಲಿ ಅಥವಾ ಮಧ್ಯಾಹ್ನದ ಊಟಕ್ಕಾಗಲಿ ಒಂದಿಷ್ಟು ಬಣ್ಣ, ರುಚಿ, ಖಾರ ಎಲ್ಲವೂ ಸೇರಿರುವ ಟೊಮೆಟೊ ಬಾತ್ ಎಲ್ಲರಿಗೂ ಇಷ್ಟವಾಗುತ್ತೆ. ಈ ಬಾತ್ ಸುಲಭವಾಗಿ ತಯಾರಾಗುವುದಲ್ಲದೇ, ಅದರ ಹುಳಿ ಟೇಸ್ಟ್ ನಿಂದ ಬಾಯಲ್ಲಿ ನೀರು ಬರೋದು ಖಂಡಿತ.
ಬೇಕಾಗುವ ಪದಾರ್ಥಗಳು:
ಅಕ್ಕಿ – 1 ಕಪ್
ಟೊಮೇಟೊ – 3
ಈರುಳ್ಳಿ – 1
ಹಸಿಮೆಣಸಿನಕಾಯಿ – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಸಾಸಿವೆ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಕರಿಬೇವು – ಕೆಲವು
ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಹುಳಿ ಪುಡಿ – ½ ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಹಳದಿ ಪುಡಿ – ಚಿಟಿಕೆ
ನೀರು – 2 ಕಪ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲು ಅಕ್ಕಿಯನ್ನು ತೊಳೆದು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
ಒಂದು ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಫ್ರೈ ಮಾಡಿ. ಈಗ ಅದಿಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಬಣ್ಣ ಬದಲಾದವರೆಗೆ ಹುರಿಯಿರಿ. ಈಗ ಟೊಮೇಟೊ ಸೇರಿಸಿ, ಮೃದುವಾಗುವವರೆಗೆ ಬೇಯಿಸಿ. ನಂತರ ಮೆಣಸಿನ ಪುಡಿ, ಹಳದಿ ಪುಡಿ, ಹುಳಿ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿ. ಈಗ ನೆನೆಸಿದ ಅಕ್ಕಿ ಹಾಗೂ ನೀರನ್ನು ಸೇರಿಸಿ ಚೆನ್ನಾಗಿ ಕಲಸಿ ಮುಚ್ಚಿ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಬಿಸಿಬಿಸಿ ಸರ್ವ್ ಮಾಡಿ.