ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಇಷ್ಟಪಡುವ ಸರಳ ಹಾಗೂ ರುಚಿಕರ ತಿಂಡಿ ಎಂದರೆ ಎಗ್ ಬ್ರೆಡ್ ಟೋಸ್ಟ್. ಬೆಳಗಿನ ಉಪಹಾರಕ್ಕೆ ಅಥವಾ ಸಂಜೆ ಸ್ನ್ಯಾಕ್ ಆಗಿ ಈ ಟೋಸ್ಟ್ ಸೂಕ್ತ.
ಬೇಕಾಗುವ ಪದಾರ್ಥಗಳು:
ಬ್ರೆಡ್ – 2 ಪೀಸ್
ಮೊಟ್ಟೆ – 1
ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು) – ಅರ್ಧ ಕಪ್
ಹಸಿ ಮೆಣಸಿನಕಾಯಿ – 1 (ಚೂರಾಗಿ ಕತ್ತರಿಸಿದದು)
ಟೊಮೆಟೊ – ಅರ್ಧ ಕಪ್ (ಕತ್ತರಿಸಿದ್ದು)
ಅರಿಶಿಣ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಬೆಣ್ಣೆ – 2 ಟೀಸ್ಪೂನ್
ಚಾಟ್ ಮಸಾಲಾ ಅಥವಾ ಮೆಣಸಿನಪುಡಿ – 1 ಟೀಸ್ಪೂನ್
ತುರಿದ ಚೀಸ್ – ಅರ್ಧ ಕಪ್
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಒಂದು ಬಟ್ಟಲಿನಲ್ಲಿ ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಅರಿಶಿಣ, ಖಾರದಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಅದಕ್ಕೆ ಮೊಟ್ಟೆಯನ್ನು ಒಡೆದು ಸೇರಿಸಿ, ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ.
ಪ್ಯಾನ್ ಬಿಸಿ ಮಾಡಿ, ಸ್ವಲ್ಪ ಬೆಣ್ಣೆ ಹಾಕಿ. ನಂತರ ಮೊಟ್ಟೆ ಮಿಶ್ರಣವನ್ನು ಪ್ಯಾನ್‌ನಲ್ಲಿ ಸುರಿದು ಸ್ವಲ್ಪ ಬೇಯಲು ಬಿಡಿ. ಅದರ ಮೇಲೆ ಬ್ರೆಡ್ ತುಂಡು ಇಟ್ಟು ಸ್ವಲ್ಪ ಒತ್ತಿ ಬೇಯಿಸಿ. ಬ್ರೆಡ್‌ನ ಎರಡೂ ಬದಿಗಳನ್ನು ಚೆನ್ನಾಗಿ ಬಿಸಿ ಮಾಡಿ. ನಂತರ ಬ್ರೆಡ್ ಮೇಲೆ ತುರಿದ ಚೀಸ್ ಹಾಕಿ ಮುಚ್ಚಿ ಬೇಯಿಸಿದರೆ ಎಗ್ ಬ್ರೆಡ್ ಟೋಸ್ಟ್ ರೆಡಿ.