FOOD | ಆರೋಗ್ಯಕರ, ರುಚಿಕರವಾದ ಪಾನೀಯ ಬೇಕೇ? ಕ್ಯಾರೆಟ್-ಬಾದಾಮ್ ಮಿಲ್ಕ್ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ಯಾರೆಟ್-ಬಾದಾಮ್ ಮಿಲ್ಕ್ ಇದು ಕೇವಲ ಶೀತ ಋತುವಿಗೆ ಮಾತ್ರವಲ್ಲ, ಎಲ್ಲಾ ಕಾಲಕ್ಕೂ ಸೂಕ್ತವಾದ ಪೌಷ್ಟಿಕ ಪಾನೀಯವಾಗಿದೆ. ಬಿಸಿಬಿಸಿ ಕುಡಿದರೆ ಉಷ್ಣತೆ ನೀಡುತ್ತದೆ, ಶೀತವಿರುವಾಗಲೂ ದೇಹವನ್ನು ತಂಪಾಗಿ ಇರಿಸುತ್ತದೆ. ಈಗ ಇದನ್ನು ಸುಲಭವಾಗಿ ತಯಾರಿಸುವ ವಿಧಾನವನ್ನು ನೋಡೋಣ!

ಬೇಕಾಗುವ ಸಾಮಗ್ರಿಗಳು:
ಖರ್ಜೂರ – 8ರಿಂದ 10
ಬಾದಾಮಿ – 10ರಿಂದ 12
ಕ್ಯಾರೆಟ್ -2
ಹಾಲು – ಅರ್ಧ ಲೀಟರ್
ಏಲಕ್ಕಿ – 4
ಬೆಲ್ಲದ ಪೌಡರ್ – 2 ಚಮಚ

ಮಾಡುವ ವಿಧಾನ:

ಮೊದಲಿಗೆ ಬಾದಾಮಿ ಹಾಗೂ ಖರ್ಜೂರವನ್ನು ಒಂದು ಬೌಲ್‌ನಲ್ಲಿ ಹಾಕಿ ಅದಕ್ಕೆ ನೀರನ್ನು ಹಾಕಿ 30 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ಸಿಪ್ಪೆ ತೆಗೆದ ಬಾದಾಮಿಯನ್ನು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ಅದಕ್ಕೆ ಹೆಚ್ಚಿದ ಕ್ಯಾರೆಟ್ ಅನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.

ನಂತರ ಅದಕ್ಕೆ ಖರ್ಜೂರ ಹಾಗೂ ಅದರ ನೀರನ್ನು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಂದು ಬೌಲ್‌ನಲ್ಲಿ ಈ ಮಿಶ್ರಣವನ್ನು ಹಾಕಿಕೊಂಡು ಅದಕ್ಕೆ ಹಾಲನ್ನು ಸೇರಿಸಿಕೊಂಡು ಕುದಿಯಲು ಬಿಡಿ. ನಂತರ ಅದಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ 2-3 ನಿಮಿಷ ಕುದಿಯಲು ಬಿಡಿ.

ಕುದಿದ ಬಳಿಕ ಗ್ಯಾಸ್ ಆಫ್ ಮಾಡಿ ಅದಕ್ಕೆ ಬೆಲ್ಲದ ಪುಡಿಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಬಿಸಿಬಿಸಿ ಕ್ಯಾರೆಟ್ ಬಾದಾಮ್ ಮಿಲ್ಕ್ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!