Tuesday, November 4, 2025

FOOD | ಸಿಂಪಲ್ ಆಂಡ್ ಟೇಸ್ಟಿ ಸ್ನ್ಯಾಕ್ ಬೇಕಾ? ಹಾಗಿದ್ರೆ ಈ ಆಲೂ ಚಾಟ್ ರೆಸಿಪಿ ಟ್ರೈ ಮಾಡಿ

ಸಂಜೆ ವೇಳೆಗೆ ಸ್ವಲ್ಪ ವಿಭಿನ್ನವಾದ ರುಚಿ ಬೇಕೆಂದರೆ ಚಾಟ್‌ಗಳೇ ಮೊದಲ ಆಯ್ಕೆ. ಬಿಸಿ ಬಿಸಿ ಆಲೂಗಡ್ಡೆ ತುಂಡುಗಳ ಮೇಲೆ ಮಸಾಲೆ, ನಿಂಬೆರಸ ಹಾಗೂ ಕೊತ್ತಂಬರಿ ಸೇರಿಸಿದರೆ ಸಿದ್ಧವಾಗುವ ಆಲೂ ಚಾಟ್‌ನ್ನು ಯಾರೇ ತಿಂದರೂ ಮೆಚ್ಚುತ್ತಾರೆ. ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಈ ರೆಸಿಪಿ ಆರೋಗ್ಯಕರವಾಗಿಯೂ ರುಚಿಕರವಾಗಿಯೂ ಇರುತ್ತದೆ.

ಬೇಕಾಗುವ ಸಾಮಗ್ರಿಗಳು:

ಆಲೂಗಡ್ಡೆ – 3 ಮಧ್ಯಮ ಗಾತ್ರದ್ದು
ಖಾರದ ಪುಡಿ – 1 ಚಮಚ
ಹುರಿದ ಜೀರಿಗೆ ಪುಡಿ – ½ ಚಮಚ
ಆಮ್ಚೂರ್ ಪುಡಿ – ¼ ಚಮಚ
ಚಾಟ್ ಮಸಾಲಾ – ¼ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಚಮಚ
ನಿಂಬೆಹಣ್ಣು – ½ ಹೋಳು
ಕೊತ್ತಂಬರಿ ಸೊಪ್ಪು – 1 ಚಮಚ

ಮಾಡುವ ವಿಧಾನ:

ಮೊದಲು ಆಲೂಗಡ್ಡೆಗಳನ್ನು ಚೆನ್ನಾಗಿ ತೊಳೆದು, ಕುಕ್ಕರ್‌ನಲ್ಲಿ ನೀರಿನೊಂದಿಗೆ ಹಾಕಿ 2 ವಿಷಲ್ ಬರುವವರೆಗೆ ಬೇಯಿಸಿಕೊಳ್ಳಿ. ಆದರೆ ಅವು ತುಂಬಾ ಮೆತ್ತಗಾಗಬಾರದು. ಬೇಯಿಸಿದ ಆಲೂಗಡ್ಡೆಗಳ ಸಿಪ್ಪೆ ತೆಗೆದು, ಚೌಕಾಕಾರದ ತುಂಡುಗಳಾಗಿ ಕತ್ತರಿಸಿಕೊಳ್ಳಿ.

ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಆಲೂಗಡ್ಡೆ ತುಂಡುಗಳನ್ನು ಹಾಕಿ ಸಣ್ಣ ಉರಿಯಲ್ಲಿ 7-10 ನಿಮಿಷ ಬಣ್ಣ ಬದಲಾಯುವವರೆಗೂ ಫ್ರೈ ಮಾಡಿ.

ಈಗ ಆಲೂಗಡ್ಡೆಗಳನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಜೀರಿಗೆ ಪುಡಿ, ಖಾರದ ಪುಡಿ, ಆಮ್ಚೂರ್ ಪುಡಿ, ಚಾಟ್ ಮಸಾಲಾ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಸ್ವಲ್ಪ ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಮ್ಮೆ ಕಲಸಿ, ಬಿಸಿ ಬಿಸಿ ಆಗಿರುವಾಗಲೇ ಸವಿಯಲು ಕೊಡಿ.

error: Content is protected !!