March 22, 2026
Sunday, March 22, 2026
spot_img

FOOD | ಮಧ್ಯಾಹ್ನ ಊಟಕ್ಕೆ ಸ್ಪೆಷಲ್ ರುಚಿ ಬೇಕಾ? ಪುದೀನಾ ಚಿಕನ್ ಟ್ರೈ ಮಾಡಿ

ಮಧ್ಯಾಹ್ನದ ಊಟಕ್ಕೆ ರುಚಿಕರವಾದ ನಾನ್‌ವೆಜ್ ಡಿಶ್ ಬೇಕೆಂದರೆ ಪುದೀನಾ ಚಿಕನ್ ಟ್ರೈ ಮಾಡಿ. ಇದು ರೊಟ್ಟಿ, ಚಪಾತಿ ಅಥವಾ ಅನ್ನದ ಜೊತೆಗೆ ತಿನ್ನೋಕೆ ಚೆನ್ನಾಗಿರುತ್ತೆ.

ಬೇಕಾಗುವ ಪದಾರ್ಥಗಳು:

ಚಿಕನ್ – 500 ಗ್ರಾಂ
ಪುದೀನಾ ಎಲೆ – 1 ಕಪ್
ಕೊತ್ತಂಬರಿ ಸೊಪ್ಪು – ½ ಕಪ್
ಈರುಳ್ಳಿ – 2
ಟೊಮ್ಯಾಟೊ – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಹಸಿಮೆಣಸು – 2
ಅರಿಶಿನ – ½ ಟೀ ಸ್ಪೂನ್
ಮೆಣಸಿನ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೇಬಲ್ ಸ್ಪೂನ್

ತಯಾರಿಸುವ ವಿಧಾನ:

ಮೊದಲು ಪುದೀನಾ, ಕೊತ್ತಂಬರಿ ಮತ್ತು ಹಸಿಮೆಣಸನ್ನು ರುಬ್ಬಿ ಹಸಿರು ಪೇಸ್ಟ್ ಮಾಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಹುರಿಯಿರಿ.

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ವಾಸನೆ ಬರುವವರೆಗೆ ಬೇಯಿಸಿ.

ಟೊಮ್ಯಾಟೊ, ಅರಿಶಿನ, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಸಿ.

ಚಿಕನ್ ಸೇರಿಸಿ 5–7 ನಿಮಿಷ ಹುರಿದು, ನಂತರ ಪುದಿನಾ ಪೇಸ್ಟ್ ಸೇರಿಸಿ.

ಮುಚ್ಚಿ ಮಧ್ಯಮ ಉರಿಯಲ್ಲಿ 15–20 ನಿಮಿಷ ಬೇಯಿಸಿ. ಕೊನೆಯಲ್ಲಿ ಗರಂ ಮಸಾಲಾ ಸೇರಿಸಿ ಕುದಿಸಿ ಇಳಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !