August 28, 2026
Friday, August 28, 2026
spot_img

ನಾಲ್ಕೇ ತಿಂಗಳ ಹಿಂದೆ ಪ್ರೀತಿಸಿ ಮದುವೆಯಾದ ಪತ್ನಿಯನ್ನು ವಿಷದ ಇಂಜೆಕ್ಷನ್ ನೀಡಿ ಕೊಂದ ಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಲ್ಕೇ ತಿಂಗಳ ಹಿಂದೆ ‘ಜೀವಕ್ಕಿಂತ’ ಹೆಚ್ಚಾಗಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಪತಿಯೇ ಭೀಕರವಾಗಿ ಕೊಲೆಗೈದ ಘಟನೆ ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದಿದೆ.

ಗುರುಗ್ರಾಮ್‌ನ ನರ್ಸಿಂಗ್ ಹೋಂನಲ್ಲಿ ರೇಡಿಯಾಲಜಿಸ್ಟ್ ಆಗಿರುವ ಕೆಲಸ ನಿರ್ವಹಿಸುತ್ತಿರುವ ಅರುಣ್ ಶರ್ಮಾ ಕೊಲೆ ಆರೋಪಿಯಾಗಿದ್ದು, ನರ್ಸ್ ಆಗಿದ್ದ ಕಾಜಲ್ ಸಾವನ್ನಪ್ಪಿದ ದುರ್ದೈವಿ.

ಇವರಿಬ್ಬರು ನರ್ಸಿಂಗ್ ಹೋಂನಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿ ಕಳೆದ ನವೆಂಬರ್‌ನಲ್ಲಿ ಮದುವೆಯಾಗಿದ್ದರು. ಮದುವೆಯಾದ ನಾಲ್ಕೇ ತಿಂಗಳಲ್ಲಿ ಪತಿ ವರದಕ್ಷಿಣೆಗಾಗಿ ಕಿರುಕುಳ ಆರಂಭಿಸಿದ್ದು, ಇಬ್ಬರ ನಡುವೆ ವೈಮನಸ್ಸು ಮೂಡಿ ಪದೇ ಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಈ ನಡುವೆ ಹೋಳಿ ಹಬ್ಬಕ್ಕಾಗಿ ಇಬ್ಬರು ಗುರುಗ್ರಾಮ್‌ನ ಗರ್ಹಿ ಹರ್ಸಾರು ಎಂಬಲ್ಲಿರುವ ಕಾಜಲ್ ಅವರ ತವರು ಮನೆಗೆ ಬಂದಿದ್ದರು. ಈ ವೇಳೆ ಅರುಣ್, ಕಾಜಲ್ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ. ಬಳಿಕ ಮುಂಜಾನೆ ಇಬ್ಬರ ನಡುವೆ ಜಗಳ ನಡೆದಿದ್ದು, ಅದಾದ ಬಳಿಕ ಕಾಜಲ್ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಈ ವೇಳೆ ಆಕೆಯ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರಾದರೂ ಆಕೆ ಸಾವನ್ನಪ್ಪಿದ್ದಾಳೆ.

ಕಾಜಲ್ ಕುಟುಂಬಸ್ಥರು ಮಗಳ ಸಾವಿಗೆ ಅರುಣ್ ಕಾರಣ ಎಂದು ಬಲವಾಗಿ ಆರೋಪಿಸಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಶೌಚಾಲಯದಲ್ಲಿ ಸಿರಿಂಜ್ ಸಿಕ್ಕಿತ್ತು. ಇದರ ಬೆನ್ನಿಗೆ ಅರುಣ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ ವೇಳೆ ಆತ ತಾನು ಕಾಜಲ್‌ಗೆ ವಿಷದ ಇಂಜೆಕ್ಷನ್ ನೀಡಿ ಹತ್ಯೆ ಮಾಡಿರುವುದಾಗಿ ಒಪ್ಪಿಗೊಂಡಿದ್ದಾನೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !