ಟೊಮೆಟೊ ಚಟ್ನಿ ಎಂದರೆ ಬಹುತೇಕ ಎಲ್ಲರ ಮನೆಯಲ್ಲೂ ತಯಾರಾಗುವ ಸಾಮಾನ್ಯ ಅಡುಗೆ. ಆದರೆ, ಟೊಮೆಟೊಗೆ ಪುದೀನಾವನ್ನು ಸೇರಿಸಿದರೆ ಚಟ್ನಿಯ ರುಚಿ ಇನ್ನಷ್ಟು ಹೆಚ್ಚುತ್ತದೆ. ಬಿಸಿ ಅನ್ನ, ಇಡ್ಲಿ, ದೋಸೆ, ಚಪಾತಿ ಅಥವಾ ಬಿಸಿಬಿಸಿ ಅಕ್ಕಿ ರೊಟ್ಟಿಯೊಂದಿಗೆ ತಿಂದರೂ ಈ ಚಟ್ನಿ ಸೂಪರ್ ರುಚಿ ನೀಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಟೊಮೆಟೊ – ½ ಕೆಜಿ
ಪುದೀನಾ – ಒಂದು ಹಿಡಿ
ಶೇಂಗಾ – 2 ಟೀಸ್ಪೂನ್
ಹಸಿ ಮೆಣಸಿನಕಾಯಿ – 200 ಗ್ರಾಂ
ಬೆಳ್ಳುಳ್ಳಿ – 10 ಎಸಳು
ಹುಣಸೆಹಣ್ಣು – ಸ್ವಲ್ಪ
ಜೀರಿಗೆ – 1 ಟೀಸ್ಪೂನ್
ಅರಿಶಿನ – ¼ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗಾಗಿ:
ಎಣ್ಣೆ – 2 ಟೀಸ್ಪೂನ್
ಸಾಸಿವೆ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಕಡಲೆಬೇಳೆ – ½ ಟೀಸ್ಪೂನ್
ಉದ್ದಿನ ಬೇಳೆ – ½ ಟೀಸ್ಪೂನ್
ಜಜ್ಜಿದ ಬೆಳ್ಳುಳ್ಳಿ – 6 ಎಸಳು
ಒಣ ಮೆಣಸಿನಕಾಯಿ – 2
ಕರಿಬೇವು – ಹಿಡಿಯಷ್ಟು
ಇಂಗು – ಒಂದು ಚಿಟಿಕೆ
ತಯಾರಿಸುವ ವಿಧಾನ:
ಮೊದಲು ಪುದೀನಾವನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ಟೊಮೆಟೊಗಳನ್ನು ಸಿಪ್ಪೆ ತೆಗೆದು ತುಂಡುಗಳಾಗಿ ಕತ್ತರಿಸಿಕೊಳ್ಳಿ.
ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಹಸಿ ಮೆಣಸಿನಕಾಯಿ ಹುರಿದು ಪಕ್ಕಕ್ಕೆ ಇಡಿ. ಅದೇ ಪಾತ್ರೆಯಲ್ಲಿ ಟೊಮೆಟೊ, ಅರಿಶಿನ, ಹುಣಸೆಹಣ್ಣು, ಉಪ್ಪು ಮತ್ತು ಜೀರಿಗೆ ಹಾಕಿ ಮೃದುವಾಗುವವರೆಗೆ ಬೇಯಿಸಿ. ಕೊನೆಯಲ್ಲಿ ಪುದೀನಾ ಎಲೆಗಳನ್ನು ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿ ತಣ್ಣಗಾಗಲು ಬಿಡಿ.
ನಂತರ ಮಿಕ್ಸರ್ ಜಾರ್‌ನಲ್ಲಿ ಹುರಿದ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಟೊಮೆಟೊ-ಪುದೀನಾ ಮಿಶ್ರಣವನ್ನು ಹಾಕಿ ನುಣ್ಣಗೆ ರುಬ್ಬಿ. ಈಗ ಸಾಸಿವೆ, ಕಡಲೆಬೇಳೆ, ಉದ್ದಿನ ಬೇಳೆ, ಒಣ ಮೆಣಸಿನಕಾಯಿ, ಕರಿಬೇವು, ಇಂಗಿನ ಒಗ್ಗರಣೆ ಹಾಕಿದರೆ ಚಟ್ನಿ ರೆಡಿ.