ಪ್ರತಿಸಾರಿ ಒಂದೇ ತರಹದ ತಿಂಡಿ ಮಾಡಿ ಬೇಜಾರಾಗಿರೋರಿಗೆ, ಸಾಂಬಾರ್ ಪುಡಿಯ ಖಾರ, ಹುಣಸೆ ಹಣ್ಣಿನ ಹುಳಿ, ಬೆಲ್ಲದ ಸಿಹಿಯ ಮಿಶ್ರಣವಿರುವ ಗೊಜ್ಜವಲಕ್ಕಿ ಮಾಡೋದು ಹೇಗೆ ಅಂತ ಹೇಳಿ ಕೊಡ್ತೀವಿ ನೋಡಿ. ಈ ತಿನಿಸು ಕೆಲವೇ ನಿಮಿಷಗಳಲ್ಲಿ ತಯಾರಾಗುತ್ತದೆ ಮತ್ತು ಎಲ್ಲರಿಗು ಇಷ್ಟವಾಗುತ್ತೆ ನೋಡಿ.
ಬೇಕಾಗುವ ಪದಾರ್ಥಗಳು:
ದಪ್ಪ ಅವಲಕ್ಕಿ (ನೆನೆಸಿದ್ದು ) – 1 ಕಪ್
ಸಾಂಬಾರು ಪುಡಿ – 2 ಚಮಚ
ಬೆಲ್ಲ -4 ಚಮಚ
ಸಾಸಿವೆ – 1 ಚಮಚ
ಉದ್ದಿನ ಬೇಳೆ -ಅರ್ಧ ಚಮಚ
ಕರಿಬೇವಿನಸೊಪ್ಪು – 3-4 ದಳ
ಹುಣಸೇಹಣ್ಣಿನ ರಸ – 6 ಚಮಚ
ಕಡಲೆ ಬೀಜ ಮತ್ತು ಗೋಡಂಬಿ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಇದಕ್ಕೆ ಉದ್ದಿನ ಬೇಳೆ, ಸಾಸಿವೆ, ಕಡಲೆ ಬೀಜ ಮತ್ತು ಗೋಡಂಬಿ ಸೇರಿಸಿ ಹುರಿದುಕೊಳ್ಳಿ. ಬಳಿಕ ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ಈಗ ಅದರಲ್ಲಿ ಹುಣಸೇಹಣ್ಣಿನ ರಸ, ಬೆಲ್ಲ, ಉಪ್ಪು ಮತ್ತು ಸಾಂಬಾರು ಪುಡಿ ಸೇರಿಸಿ ಚೆನ್ನಾಗಿ ಕಲಸಿ ಕುದಿಸಿ. ಈ ಮಿಶ್ರಣಕ್ಕೆ ತೊಳೆದು ನೆನೆಸಿಟ್ಟಿರುವ ದಪ್ಪ ಅವಲಕ್ಕಿಯನ್ನು ಹಾಕಿ, ಎಲ್ಲವು ಒಟ್ಟಾಗಿ ಮಿಕ್ಸ್ ಆಗುವಂತೆ ಚೆನ್ನಾಗಿ ಬೆರೆಸಿ.
ಮೂರ್ನಾಲ್ಕು ನಿಮಿಷ ಬಿಸಿ ಮಾಡಿದ್ದಾರೆ ಗೊಜ್ಜವಲಕ್ಕಿ ಸವಿಯಲು ಸಿದ್ಧ.