ಮಧ್ಯಾಹ್ನದ ಅನ್ನ ಉಳಿದಿದ್ರೆ ರಾತ್ರಿ ಊಟಕ್ಕೆ ಅದನ್ನೇ ತಿನ್ನೋಕೆ ಇಷ್ಟ ಇಲ್ಲ ಅಂದ್ರೆ ಸಂಜೆಗೆ ಸೂಪರ್ ಟೇಸ್ಟಿ ಸ್ನ್ಯಾಕ್ಸ್ ಮಾಡಿ ಮುಗಿಸಿಬಿಡಿ. ಆದ್ರೆ ಯಾವ ರೀತಿ ಸ್ನ್ಯಾಕ್ಸ್ ಮಾಡೋದು ಅಂತ ಯೋಚ್ನೆ ಮಾಡಿದ್ರೆ ಚೀಸ್ ರೈಸ್ ಕಟ್ಲೆಟ್ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು
1 ಕಪ್ ಅನ್ನ
1/2 ಕಪ್ ಬೇಯಿಸಿ,, ಹಿಸುಕಿದ ಜೋಳ
2 ಚಮಚ ರವೆ
1/4 ಟೀಸ್ಪೂನ್ ಅರಿಶಿನ
ಉಪ್ಪು ಅಗತ್ಯಕ್ಕೆ ತಕ್ಕಷ್ಟು
2 ಸ್ಪೂನ್ ವರ್ಜಿನ್ ಆಲಿವ್ ಆಯಿಲ್
1 ಈರುಳ್ಳಿ
1 ಟೀಸ್ಪೂನ್ ಬೆಳ್ಳುಳ್ಳಿ ಪೇಸ್ಟ್
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1/2 ಟೀಸ್ಪೂನ್ ಕೊತ್ತಂಬರಿ ಪುಡಿ
ಅಗತ್ಯಕ್ಕೆ ತಕ್ಕಷ್ಟು ಚೀಸ್ ತುಂಡುಗಳು
ಮಾಡುವ ವಿಧಾನ:
ಮೊದಲಿಗೆ ಒಂದು ಪ್ಯಾನ್ ನಲ್ಲಿ ಎಣ್ಣೆ ಬಿಸಿ ಮಾಡಿ,ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಫ್ರೈ ಮಾಡಿ. ಅದಕ್ಕೆ ಬೇಯಿಸಿದ ಕಾರ್ನ್, ಕೆಂಪು ಮೆಣಸಿನ ಪುಡಿ, ಅರಿಶಿನ, ಕೊತ್ತಂಬರಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಬೇಯಿಸಿದ ಅನ್ನವನ್ನು ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಫ್ರೈ ಮಾಡಿದ ಕಾರ್ನ್ ಮಿಶ್ರಣ ಹಾಗೂ ರವೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಸಣ್ಣ ಉಂಡೆಗಳನ್ನಾಗಿ ಮಾಡಿ ಮದ್ಯದಲ್ಲಿ ಸಣ್ಣ ಚೀಸ್ ತುಂಡನ್ನು ತುಂಬಿಸಿ ಎರಡು ಕೈಗಳಿಂದ ಒತ್ತಿ. ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿದರೆ ಚೀಸ್ ರೈಸ್ ಕಟ್ಲೆಟ್ ರೆಡಿ.