ಯಾವ ಸಮಯದಲ್ಲಿ ಯಾವ ಆಹಾರ ತಿನ್ನುತ್ತೀವಿ ಎನ್ನೋದು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕಾಲಕ್ಕೆ ತಕ್ಕಂತಹ ಆಹಾರ ಪದಾರ್ಥ ಸೇವನೆ ಮಾಡಿದೆ. ಬೇಸಿಗೆಯಲ್ಲಿ ಸಾಕಷ್ಟು ಆಹಾರ ಪದಾರ್ಥಗಳನ್ನು ಅವಾಯ್ಡ್ ಮಾಡಬೇಕು, ಅದರಲ್ಲಿ ಇವು ಪ್ರಮುಖವಾದವು..
ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣ ಆಗುವುದು ಕೆಫೀನ್, ಹಾಗಾಗಿ ಅದರಿಂದ ದೂರ ಇರಿ.
ಉಪ್ಪಿನಕಾಯಿಯಲ್ಲಿ ಇರುವ ಹೈ ಸೋಡಿಯಂ ದೇಹದಲ್ಲಿನ ನೀರನ್ನು ಇಂಗಿಸುತ್ತದೆ.
ಕಾರ್ಬೋನೇಟೆಡ್ ಡ್ರಿಂಕ್‌ಗಳ ಬಯಕೆ ಆಗೋದು ಬೇಸಿಗೆಯಲ್ಲೇ ಆದರೆ ಇದು ಆರೋಗ್ಯಕ್ಕೆ ಹಾನಿಕರ, ಸೋಡಾ, ಸಕ್ಕರೆ ಇರುವ ಪಾನೀಯಗಳ ಸೇವನೆ ನಿಲ್ಲಿಸಿ
ಹಣ್ಣಿನ ಜ್ಯೂಸ್ ಬದಲು ಹಣ್ಣನ್ನೇ ತಿನ್ನಿ. ಫೈಬರ್ ಸಿಗುವುದು ಹಣ್ಣು, ಸಿಪ್ಪೆಯಿಂದ ನೆನಪಿರಲಿ.
ಮದ್ಯಪಾನ ಬೇಸಿಗೆಯಲ್ಲಿ ಅಷ್ಟೇ ಅಲ್ಲ, ಸದಾ ಒಳ್ಳೆಯದಲ್ಲ. ಇದನ್ನು ಯಾವಾಗ ಬಿಟ್ಟರೂ ಒಳ್ಳೆಯದೆ.
ಹೆಚ್ಚು ಉಪ್ಪು ತಿನ್ನೋ ಅಭ್ಯಾ ಬೇಡ, ನೀರನ್ನು ದೇಹದಿಂದ ಎಳೆದುಕೊಳ್ಳುವ ಶಕ್ತಿ ಉಪ್ಪಿಗಿದೆ.
ಜಂಕ್‌ಫುಡ್‌ಗಳನ್ನು ನಿಲ್ಲಿಸಿ, ಮೈದಾದಿಂದ ಹೊಟ್ಟೆ ಕೆಡುತ್ತದೆ.
ಎಣ್ಣೆಯಲ್ಲಿ ಕರಿದ ಪದಾರ್ಥದಿಂದ ಡೀಹೈಡ್ರೇಷನ್ ಆಗುತ್ತದೆ. ಮಲಬದ್ಧತೆ ಬರುತ್ತದೆ.