ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಘಾಲಯದ ತುರಾದಲ್ಲಿ ಕೇವಲ ಆರು ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಫುಟ್‌ಬಾಲ್ ಸ್ಟೇಡಿಯಂನ ಒಂದು ಭಾಗ ಕುಸಿದುಬಿದ್ದಿದೆ.
ಪಿಎ ಸಂಗ್ಮಾ ಫುಟ್ಬಾಲ್ ಕ್ರೀಡಾಂಗಣದ ಒಂದು ಭಾಗ ಕುಸಿದಿದ್ದು, ಈ ಕ್ರೀಡಾಂಗಣದ ಒಟ್ಟು ವೆಚ್ಚ 127 ಕೋಟಿ ರೂಪಾಯಿಗಳಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ.
ತುರಾ ಮತ್ತು ವೆಸ್ಟ್ ಗರೋ ಹಿಲ್ಸ್ ಪ್ರದೇಶದಲ್ಲಿ ಭಾರೀ ಮಳೆ ಬಿದ್ದಿದ್ದು, ಪಿಎ ಸಂಗ್ಮಾ ಸ್ಪೋರ್ಟ್ ಕಾಂಪ್ಲೆಕ್ಸ್‌ನ ಫೂಟ್‌ಬಾಲ್ ಕ್ರೀಡಾಂಗಣದ ತಡೆಗೋಡೆಯ ಒಂದು ಭಾಗ ಕುಸಿದಿದೆ. ಇದಕ್ಕೆ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ.