ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ನಟ ಸೈಫ್ ಅಲಿ ಖಾನ್ ಚೇತರಿಕೆ ಪಡೆದುಕೊಳ್ಳುತ್ತಿದ್ದಾರೆ. ಈ ವೇಳೆಯಲ್ಲಿ ಇವರ ಫ್ಯಾಮಿಲಿ ರಿಯಾಕ್ಷನ್ ಕ್ಯಾಪ್ಚರ್ ಮಾಡೋದಕ್ಕೆ ಪ್ಯಾಪರಾಝಿಗಳು ಮನೆಯ ಮುಂದೆಯೇ ಕಾದು ಕುಳಿತಿದ್ದಾರೆ. ಇದರಿಂದಾಗಿ ಇಡೀ ಕುಟುಂಬಕ್ಕೆ ಪ್ರೈವೆಸಿ ಇಲ್ಲದಂತಾಗಿದೆ.
ಈ ಕಾರಣದಿಂದ ನಟಿ ಕರೀನಾ ಕಪೂರ್ ಪ್ಲೀಸ್ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಎಂದು ಕೈ ಮುಗಿದಿರುವ ಇಮೋಜಿ ಹಾಕಿ ಸ್ಟೇಟಸ್ ಹಾಕಿದ್ದಾರೆ.
ಕರೀನಾ ಮನೆಗೆ ಆಟಿಕೆ ತರುತ್ತಿರುವುದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋನ ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ತೈಮೂರ್ ಹಾಗೂ ಜೇ ಅಲಿಗೆ ಹೊಸ ಆಟಿಕೆ’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿತ್ತು. ಇದು ಕರೀನಾ ಗಮನಕ್ಕೆ ಬಂದಿದೆ. ‘ಇದನ್ನು ಈಗಲೇ ನಿಲ್ಲಿಸಿ. ನಿಮಗೆ ಹೃದಯ ಇದೆಯೇ? ನಮ್ಮನ್ನು ಒಂಟಿಯಾಗಿ ಇರಲು ಬಿಡಿ’ ಎಂದು ಕರೀನಾ ಸಿಟ್ಟಲ್ಲಿ ಬರೆದುಕೊಂಡಿದ್ದರು. ಇದಕ್ಕೆ ನಮಸ್ಕರಿಸುತ್ತಿರುವ ಎಮೋಜಿ ಕೂಡ ಹಾಕಿದ್ದಾರೆ. ಆ ಬಳಿಕ ಏನನ್ನಿಸಿತೋ ಏನೋ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.