ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ವರುಣ ಪ್ರತ್ಯಕ್ಷವಾಗಿದ್ದು, ಜನಜೀವನ ಹೈರಾಣಾಗಿದೆ.
ಆಫೀಸ್ಗೆ ತೆರಳುವವರು, ಶಾಲಾ ಕಾಲೇಜಿಗೆ ತೆರಳುವವರಿಗೆ ಬೆಳಗ್ಗಿನ ಮಳೆಯಿಂದ ಸಾಕಷ್ಟು ತೊಂದರೆ ಉಂಟಾಗಿದೆ.
ಅರ್ಧ ದಿನ ಮಳೆಗೆ ರಸ್ತೆಗಳಲ್ಲಿ ನೀರು ನಿಂತಿದ್ದು, ಬೆಳಗಳೂರಿನಲ್ಲಿ ಈಗಾಗಲೇ ಪೂಲ್ ಪಾರ್ಟಿ ಆರಂಭವಾಯ್ತು ಎಂದು ಜನ ಟ್ರೋಲ್ ಮಾಡುತ್ತಿದ್ದಾರೆ.
ಮೆಜೆಸ್ಟಿಕ್, ಎಂ.ಜಿ.ರೋಡ್, ಶಿವಾಜಿ ನಗರ, ಮೇಖ್ರಿ ಸರ್ಕಲ್, ಯಶ್ವಂತಪುರ, ರಾಜಾಜಿ ನಗರ, ವಿಜಯನಗರ, ಕೆ.ಆರ್. ಮಾರ್ಕೆಟ್, ಯಲಹಂಕ, ಬಸವೇಶ್ವರನಗರ, ಹೆಬ್ಬಾಳ, ಬನಶಂಕರಿ, ಬಸವನಗುಡಿಯಲ್ಲಿ ಭಾರೀ ಮಳೆಯಾಗಿದೆ.
https://twitter.com/BharadwajSudath/status/1671040584801452032?s=20
https://twitter.com/namma_vjy/status/1671017029284024322?s=20