ಮೇಘನಾ ಶೆಟ್ಟಿ ಶಿವಮೊಗ್ಗ
ಎಲ್ಲ ಚನಾಗೇ ಇದೆ, ನಮ್ಮ ಸಂಸಾರದಲ್ಲಿ ಯಾವುದೇ ಪ್ರಾಬ್ಲಮ್ ಇಲ್ಲ. ನಾನು ನನ್ನ ಹೆಂಡತಿ ಆಗಾಗ ಹೊರಗೆ ಹೋಗ್ತೀವಿ, ಗಿಫ್ಟ್ ಕೊಡಿಸ್ತೀನಿ ಎಂದೆಲ್ಲ ಹೇಳಬಹುದು. ಬಟ್ ಯಾವುದೇ ಮೊಮೆಂಟ್‌ನಲ್ಲಿ ನಿಮ್ಮ ಮದುವೆ ಮುರಿದು ಬೀಳಬಹುದು. ಇದಕ್ಕೆ ಕಾರಣ ನೀವೇ ಆಗಿರಬಹುದು. ದಿನವೂ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು, ಒನ್ ಸೈಡೆಡ್ ಎಫರ್ಟ್, ಸಮಸ್ಯೆಯ ಕೊನೆ ತನಕ ಹೋಗದೇ ಹಾಗಿ ಮುಚ್ಚಿ ಲೈಫ್ ಮಸ್ಟ್ ಗೋ ಆನ್ ಎಂದುಕೊಂಡರೆ ಒಂದಲ್ಲಾ ಒಂದು ದಿನ ನಿಮ್ಮ ಸಂಸಾರದಲ್ಲಿ ಸಾರವೇ ಇಲ್ಲದಂತೆ ಆಗುತ್ತದೆ.
ಗಂಡಸರಷ್ಟೇ ಯಾಕೆ ಎಫರ್ಟ್ ಹಾಕಬೇಕು? ಹೆಂಗಸರ ಪಾರ್ಟ್ ಇಲ್ವಾ? ಅನ್ನೋ ಪ್ರಶ್ನೆ ಎದುರಾಗಬಹುದು,ಬಟ್ ಇಂದು ಗಂಡಸರ ಡ್ಯೂಟಿ ಬಗ್ಗೆ ಅರ್ಥ ಮಾಡಿಕೊಳ್ಳೋಣ.. ಮುಂದೊಂದು ದಿನ ಹೆಂಗಸರ ಡ್ಯೂಟಿ ಬಗ್ಗೆಯೂ ಆರ್ಟಿಕಲ್ ನಿರೀಕ್ಷೆ ಮಾಡಬಹುದು..
ನಿಮ್ಮ ಸಂಸಾರ ಉಳಿಯಬೇಕು ಅಂದರೆ ಗಂಡಸರು ನಿತ್ಯವೂ ಈ ಕೆಲಸಗಳನ್ನು ಮಾಡಲೇಬೇಕು..
ಜಾಸ್ತಿ ಕೇಳೋದಿಲ್ಲ, ಹೆಂಗಸರು ಸಿಂಪಲ್ ಜೀವಿಗಳು. ಮಾತನಾಡಿ!! ಅಷ್ಟೇ ಏನು ಅನಿಸುತ್ತಿದೆ, ಯಾಕೆ ಅನಿಸುತ್ತಿದೆ, ಏನು ಇಷ್ಟ ಆಗ್ತಿಲ್ಲ, ಏನು ಇಷ್ಟ ಆಯ್ತು? ಇವೆಲ್ಲವನ್ನೂ ನಿಮ್ಮ ನಿಮ್ಮಲ್ಲೇ ಇಟ್ಟುಕೊಂಡ್ರೆ ಉಪಯೋಗ ಇಲ್ಲ. ಬಾಯಿಬಿಟ್ಟು ಪತ್ನಿ ಜೊತೆ ಮಾತನಾಡಿ. ಅರ್ಧ ಸಮಸ್ಯೆ ಅಲ್ಲೇ ಮುಗಿದುಹೋಗುತ್ತದೆ.
ಬರೀ ಮಾತಲ್ಲಿ ಪ್ರೀತಿ ತೋರಿಸಿದರೆ ಸಾಲದು, ಸ್ವಲ್ಪ ಸಮಯದ ನಂತರ ಇವನದ್ದು ಬರೀ ಮಾತಲ್ಲಿ ಮಾತ್ರ ಪ್ರೀತಿ ಎಂದು ಹೆಂಗಸರಿಗೆ ಅನಿಸುವುದು ಗ್ಯಾರೆಂಟಿ. ಅನಿರೀಕ್ಷಿತ ದಿನದಂದು ಮಲ್ಲಿಗೆ ಹೂವು ನೀಡುವುದು, ಇದ್ದಕ್ಕಿದ್ದಂತೆಯೇ ಹೊರಗೆ ಹೋಗೋದಕ್ಕೆ ಪ್ಲಾನ್ ಮಾಡೋದು, ಅತಿ ಅದ್ಭುತ ಅಡುಗೆ ಮಾಡಿದ ಕೈಗೊಂದು ಮುತ್ತು ಕೊಡೋದು, ಆಕೆ ಬಟ್ಟೆ ಮಡಚುವಾಗಿ ಹಿಂಬದಿಯಿಂದ ಹೋಗಿ ಹಗ್ ಮಾಡೋದು ಕಷ್ಟದ ಟಾಸ್ಕ್ ಅಲ್ಲ ಅಲ್ವಾ?
ಏನಿವರು ಬರೀ ಮಾತನಾಡಿ, ಪ್ರೀತಿ ಮಾಡಿ, ಹಗ್ ಮಾಡಿ ಅಂತಾರೆ ಅಂದುಕೊಳ್ಳಬೇಡಿ. ಇದನ್ನು ಅತಿಯಾಗಿ ಮಾಡಿದ್ರೂ ಹೆಂಗಸರಿಗೆ ಕಷ್ಟ. ಹೆಂಡತಿ ಅರ್ಧ ಗಂಟೆ ಹೊರಗೆ ಹೋಗಿ ಬರ್ತೀನಿ ಅಂದಾಗ ನಾನು ಬರ್ತೀನಿ ಅಂತ ಹೊರಡಬೇಡಿ. ಗಂಡ ಬಾಯ್ಸ್ ಜೊತೆ ಪಬ್ ಹೋಗ್ತೀನಿ ಅಂದಾಗ ನಾನು ಬರ್ಲಾ ಅಂತ ಕೇಳಲೂ ಬೇಡಿ. ಪ್ರೈವೆಸಿ ಇಬ್ಬರಿಗೂ ಇರಲಿ. ಬಟ್ ಅತಿಯಾದ ಪ್ರೈವೆಸಿ ಕೊಡಬೇಡಿ. ಇಬ್ಬರು ದೂರ ದೂರ ಇರೋದು ಕೂಡ ಮಾಮೂಲಿ ಎನಿಸಿಬಿಟ್ಟಾತು!
ಕ್ಷಮಿಸೋದನ್ನು ಕಲಿಯಿರಿ. ಮಿಸ್ ಆಗಿ ಮಾಡಲಿ, ಬೇಕಂತಲೇ ತಪ್ಪು ಮಾಡಲಿ. ಆಕೆ ಮನಸ್ಸಿನಿಂದ ಸಾರಿ ಕೇಳಿ, ಯಾಕೆ ಹಾಗೆ ಮಾಡಿದ್ಲು ಎಂದು ಒಪ್ಪಿಕೊಂಡಾಗ ಕ್ಷಮಿಸಿಬಿಡಿ. ಮತ್ತೆಂದೂ ಈ ಹಳೇ ವಿಷಯ ತೆಗೆಯಬೇಡಿ. ಯಾರ ಮನಸ್ಸು ಕೂಡ ಡಸ್ಟ್‌ಬಿನ್ ಆಗಬಾರದು. ಅಂದಿನ ಕಸ ಅಂದೇ ಹೊರಗೆ ಹಾಕಿ.
ಆಕೆಗೆ ಅನುಮಾನ ಬರೋ ರೀತಿ ನಡೆದುಕೊಳ್ಳಬೇಡಿ. ನಿಮ್ಮ ಸಣ್ಣ ಅನುಮಾನದ ನಡೆ ಆಕೆಯ ಜೀವವನ್ನೇ ನಡುಗಿಸುತ್ತದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ಓವರ್ ಥಿಂಕ್ ಮಾಡ್ತಾರೆ. ನಿಮ್ಮ ಸಣ್ಣ ನಡೆಯಿಂದ ಆಕೆ ಭಯಪಟ್ಟು ಎಲ್ಲಾ ರೀತಿಯ ಕೆಟ್ಟ ಸನ್ನಿವೇಶಗಳನ್ನು ಊಹೆ ಮಾಡಿಕೊಂಡು ಕೊರಗಿರುತ್ತಾಳೆ. ನಿಷ್ಕಲ್ಮಶವಾಗಿ ಪ್ರೀತಿಸಿದ ಮೇಲೆ ಆಕೆಗೆ ಅನುಮಾನ ಬರುವಂತೆ ನಡೆದುಕೊಂಡು ಸಾಧಿಸೋದು ಏನಿದೆ?
ಗಂಡ ಹೆಂಡತಿ ಮಧ್ಯೆ ಎಫರ್ಟ್ ಎಂದಿಗೂ 50:50 ಅಲ್ಲವೇ ಅಲ್ಲ. ಒಮ್ಮೊಮ್ಮೆ ಅದು 90:10, 60:40 ಕೂಡ ಆಗಿರಬಹುದು. ಪ್ರೀತಿ, ಕಾಳಜಿ ಆಚೆ ಈಚೆ ಆದಾಗಲೂ ಗೌರವ 100% ಇರಲಿ. ಒಬ್ಬ ಮನುಷ್ಯನಿಗೆ ಮನುಷ್ಯನಾಗಿ ಗೌರವ ಕೊಡೋದಕ್ಕೆ ಆಗೋದಿಲ್ಲ ಅಂದರೆ ಪ್ರೀತಿ ದೂರದ ಮಾತು!
ಎಮೋಷನಲ್ ಹಾಗೂ ಫಿಸಿಕಲ್ ಕನೆಕ್ಷನ್ ಆಕೆ ಜೊತೆ ಮಾತ್ರ ಇರಲಿ. ಅವಳ ಕನಸಿಗೆ ದಾರಿ ಹುಡುಕಿ, ಆಗಾಗ ಸರ್ಪ್ರೈಸ್ ಮಾಡಿ. ನೀವು ತಪ್ಪು ಮಾಡಿದರೂ ಆನೆಸ್ಟ್ ಆಗಿ ಮುಂದೆ ಬನ್ನಿ. ಒಪ್ಪಿಕೊಂಡು ಕ್ಷಮೆ ಕೇಳಿ. ಇಬ್ಬರೂ ಎಂಜಾಯ್ ಮಾಡುವ ಆಕ್ಟಿವಿಡಿಗಳಿಗೆ ಸಮಯ ನೀಡಿ.
ಕೆಲವು ಕೆಲಸಗಳು ಅವಳದ್ದೇ ಅಂತ ಲಿಸ್ಟ್ ಮಾಡಬೇಡಿ. ಒಂದು ದಿನ ಅವಳು ಮಾಡಿಲ್ಲ ಎಂದರೆ ನೀವು ಮಾಡೋದ್ರಲ್ಲಿ ತಪ್ಪಿಲ್ಲ. ಅವಳು ಮಾಡೋಳಿದ್ದರೂ ನಾನು ಮಾಡ್ತೇನೆ ಎಂದು ಎದ್ದು ಹೋಗೋದ್ರಿಂದ ಮೇಲ್ ಈಗೋಗೆ ಪೆಟ್ಟು ಬೀಳೋದಿಲ್ಲ. ನಾನು ಗಂಡಸು ಅನ್ನೋ ಈಗೋ ಇದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಸುತ್ತಮುತ್ತ ಸುದೀರ್ಘವಾದ ಮದುವೆಯನ್ನು ಉಳಿಸಿಕೊಂಡು ಬಂದ ಯಾರೇ ಇದ್ದರೂ ಅವರನ್ನು ಮಾತನಾಡಿಸಿ. ನಿಮ್ಮ ಮದುವೆ ಸೀಕ್ರೆಟ್ ಏನು ಅಂದರೆ ನಿಸ್ಸಂಕೋಚವಾಗಿ ಹೆಂಡತಿ ಹೇಳಿದ್ದಕ್ಕೆ ಒಕೆ ಹೇಳಿ ಎಂದು ಹೇಳ್ತಾರೆ.