ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಗೆದ್ದು ಬೀಗಿದ ಆಸ್ಟ್ರೇಲಿಯಾಕ್ಕೆ ಮಿಚೆಲ್ ಸ್ಟಾರ್ಕ್ ಸ್ಟಾರ್ ಬೌಲರ್.
ಫೈನಲ್ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮಿಂಚಿದ್ದ ಸ್ಟಾರ್ಕ್, ಇದೀಗ ನೀಡಿದ ಹೇಳಿಕೆ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಹೌದು,ಅದೇನೆಂದರೆ, ನನಗೆ ಐಪಿಎಲ್ ದುಡ್ಡಿಗಿಂತ ದೇಶದ ಪರವಾಗಿ ಟೆಸ್ಟ್ ಪಂದ್ಯಗಳಲ್ಲಿ ಆಡುವುದೇ ದೊಡ್ಡದು ಎಂದು ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.
ವಿಶೇಷ ಅಂದರೆ ಈ ಬಾರಿಯ ಐಪಿಎಲ್ 2023ನೇ ಆವೃತ್ತಿಯಲ್ಲಿ ಸ್ಟಾರ್ಕ್ ಆಡಿರಲಿಲ್ಲ.
ತಮ್ಮ ಗೆಲುವಿನ ಕುರಿತು ಮಾತನಾಡುತ್ತಾ , ಆಸ್ಟ್ರೇಲಿಯಾ ತಂಡದ ಪರವಾಗಿ ಟೆಸ್ಟ್ ಕ್ರಿಕೆಟ್ ಆಡುವುದು ಅತ್ಯುನ್ನತ ಸಾಧನೆಯಾಗಿದೆ. ಭವಿಷ್ಯದಲ್ಲಿ ಅನೇಕ ಯುವಕರು ಈ ಮಾರ್ಗವನ್ನು ಅನುಸರಿಸುತ್ತಾರೆ ಎಂದು ಅವರು ಆಶಿಸಿದ್ದಾರೆ.
ನಾನು ಐಪಿಎಲ್ನಲ್ಲಿ ಚೆನ್ನಾಗಿ ಆಡಿದ್ದೇನೆ. ನಾನು 10 ವರ್ಷಗಳ ಹಿಂದೆ ಯಾರ್ಕ್ಶೈರ್ನಲ್ಲಿ ಆಡಿದ್ದೇನೆ. ಆದರೆ ಆಸ್ಟ್ರೇಲಿಯಾ ತಂಡವೇ ನನ್ನ ಆದ್ಯತೆ. ನಾನು ಈ ವಿಚಾರದಲ್ಲಿ ನನಗೆ ನಷ್ಟವಿಲ್ಲ. ಹಣ ಬರುತ್ತದೆ ಮತ್ತು ಹೋಗುತ್ತದೆ. ಆದರೆ ರಾಷ್ಟ್ರಿಯ ತಂಡದ ಪರವಾಗಿ ಆಡಲು ನನಗೆ ದೊರೆತ ಅವಕಾಶಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಸ್ಟಾರ್ಕ್ ತಿಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲು ಬಯಸುವ ಹಲವರಿದ್ದಾರೆ. ಫ್ರಾಂಚೈಸಿ ಕ್ರಿಕೆಟ್ನಲ್ಲಿ ದುಡ್ಡು ಸಿಗುತ್ತದೆ. ಆದರೆ, ಆಯ್ಕೆ ಪ್ರಮುಖ ಎಂದು ಸ್ಟಾರ್ಕ್ ಹೇಳಿದ್ದಾರೆ.
ನಾನು ಖಂಡಿತವಾಗಿಯೂ ಐಪಿಎಲ್ನಲ್ಲಿ ಮತ್ತೆ ಆಡಲು ಇಷ್ಟಪಡುತ್ತೇನೆ. ಆದರೆ ದೀರ್ಘಕಾಲದವರೆಗೆ ನನ್ನ ಗುರಿ ಆಸ್ಟ್ರೇಲಿಯಾ ತಂಡ. ಅದು ಯಾವುದೇ ಸ್ವರೂಪವಾಗಿರಲಿ ಎಂದು ಸ್ಟಾರ್ಕ್ ಪ್ರತಿಪಾದಿಸಿದ್ದಾರೆ.
ಟೆಸ್ಟ್ ಗೆಲುವಿನ ಕೊನೆಯಲ್ಲಿ ನನ್ನ ತಂಡದ ಸದಸ್ಯರೊಂದಿಗೆ ಕುಳಿತು ಸಂಭ್ರಮಿಸುವುದಕ್ಕೆ ಸರಿಸಾಟಿ ಯಾವುದೂ ಇಲ್ಲ. ನನಗೆ ಆಸ್ಟ್ರೇಲಿಯಾ ತಂಡದ ಕ್ಯಾಪ್ ಅನ್ನು ಪ್ರತಿನಿಧಿಸುವುದೇ ನನ್ನ ಗುರಿ ಎಂದು ಅವರು ಹೇಳಿದ್ದಾರೆ.
ಫ್ರ್ಯಾಂಚೈಸ್ ಕ್ರಿಕೆಟ್ ಅದ್ಭುತವಾಗಿರುತ್ತದೆ. ನಿಮ್ಮನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಆದರೆ ರಾಷ್ಟ್ರೀಯ ತಂಡವನ್ನು ದೀರ್ಘ ಕಾಲ ಪ್ರತಿನಿಧಿಸುವುದು ದೊಡ್ಡ ಹೆಮ್ಮೆ ಎಂಬುದಾಗಿ ಸ್ಟಾರ್ಕ್ ಹೇಳಿದ್ದಾರೆ.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 2015ರಲ್ಲಿ ಕೊನೆಯ ಬಾರಿಗೆ ಆಡಿದ್ದರು 33 ವರ್ಷದ ಸ್ಟಾರ್ಕ್.