ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರೋಧಿಗಳು ಮೊದಲು ಕುಟುಂಬ ಅಂತಾರೆ ಆದರೆ ನಾನು ಮೊದಲು ದೇಶ ಎನ್ನುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸ್ವಜನಪಕ್ಷಪಾತ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ನಾನು ಹೇಳುತ್ತಲೇ ಬಂದಿದ್ದೇನೆ. ಇದರಿಂದ ಎಷ್ಟೋ ಯುವಕರ ಅವಕಾಶ ಕಸಿದುಕೊಂಡಂತಾಗುತ್ತದೆ. ಆದರೆ ಇದಕ್ಕೆ ವಿಪಕ್ಷಗಳು ಸ್ಪಂದನೆ ನೀಡಿಲ್ಲ. ಅವರಿಗೆ ಕುಟುಂಬವೇ ಮೊದಲು, ಆದರೆ ನನಗೆ ದೇಶವೇ ಮೊದಲು ಎಂದಿದ್ದಾರೆ.
ಎಷ್ಟೋ ನಾಯಕರ ಕುಟುಂಬ ಸದಸ್ಯರು ದುಬಾರಿ ಉಡುಗೊರೆಗಳ ಮೂಲಕ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತನೆ ಮಾಡಿದ್ದಾರೆ. ಆದರೆ ನಾನು ಪಡೆದ ಉಡುಗೊರೆಗಳನ್ನು ಹರಾಜು ಹಾಕಿಸಿದ್ದೇನೆ. ಆ ಹಣವನ್ನು ಸರ್ಕಾರಿ ಖಜಾನೆಗೆ ಹಾಗೂ ಗಂಗಾ ಮಾತೆಯ ಸೇವೆಗೆ ಬಳಸಲಾಗಿದೆ ಎಂದಿದ್ದಾರೆ.