ಮೊದಲ ಬಾರಿಗೆ ನ್ಯೂಯಾರ್ಕ್​ ನಗರದಲ್ಲಿ ದೀಪಾವಳಿಗೆ ಅಧಿಕೃತ ರಜೆ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇದೇ ಮೊದಲ ಬಾರಿಗೆ ನ್ಯೂಯಾರ್ಕ್​ ನಗರದಲ್ಲಿ ದೀಪಾವಳಿಗೆ ಅಧಿಕೃತ ರಜೆ ಘೋಷಣೆ ಮಾಡುವ ಮೂಲಕ ಐತಿಹಾಸಿಕ ನಡೆ ಇಟ್ಟಿದೆ.

ನ್ಯೂಯಾರ್ಕ್​ ನಗರದಲ್ಲಿ 1.1 ಮಿಲಿಯನ್​ ವಿದ್ಯಾರ್ಥಿಗಳು ಈ ಬೆಳಕಿನ ಹಬ್ಬದ ಆಚರಣೆ ಮಾಡುತ್ತಿದ್ದಾರೆ. ನ್ಯೂಯಾರ್ಕ್​ನ ಸಾರ್ವಜನಿಕ ಶಾಲೆಗಳಲ್ಲಿ ದೀಪಾವಳಿಗೆ ರಜೆ ಘೋಷಣೆ ಮಾಡುವ ಸಂಬಂದ ಕಳೆದ ವರ್ಷ ಗವರ್ನರ್​ ಕ್ಯಾತಿ ಹೊಚುಲ್​ ಶಾಸನಕ್ಕೆ ಸಹಿ ಹಾಕಿದ್ದರು. ಇದು ಈ ವರ್ಷದಿಂದ ಜಾರಿಯಾಗಿದ್ದು, ದೀಪಾವಳಿ ಹಿನ್ನೆಲೆ ನವೆಂಬರ್​ 1 ಶಾಲೆಗಳಿಗೆ ರಜೆ ನೀಡಲಾಗಿದೆ.

ನ್ಯೂಯಾರ್ಕ್ ನಗರದ ಮೇಯರ್ ಕಚೇರಿಯ ಡೆಪ್ಯುಟಿ ಕಮಿಷನರ್ ದಿಲೀಪ್ ಚೌಹಾಣ್​ ಮಾತನಾಡಿ, ನ್ಯೂಯಾರ್ಕ್ ನಗರದಲ್ಲಿ ಮೊದಲ ಬಾರಿಗೆ ದೀಪಾವಳಿ ದಿನದಂದು ಅಧಿಕೃತವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಇದು ನಮ್ಮ ನಗರದ ವೈವಿಧ್ಯತೆ ಮತ್ತು ನಮ್ಮ ಸಮುದಾಯ ಮತ್ತು ನಾಯಕರ ದಣಿವರಿಯದ ಪ್ರಯತ್ನಗಳಿಂದಾಗಿ ಹಬ್ಬವನ್ನು ಆಚರಿಸುತ್ತಿರುವುದು ಒಂದು ಮೈಲಿಗಲ್ಲಾಗಿದೆ. 1.1 ಮಿಲಿಯನ್ ವಿದ್ಯಾರ್ಥಿಗಳು ಈ ಹಬ್ಬವನ್ನು ಸಂಭ್ರಮಿಸಲಿದ್ದಾರೆ. ದೀಪಾವಳಿಯು ಏಕತೆಯ ಸಂಕೇತವಾಗಿದ್ದು, ಕತ್ತಲೆಯ ಮೇಲೆ ಬೆಳಕು ಮತ್ತು ಅಜ್ಞಾನದ ಮೇಲೆ ಜ್ಞಾನದ ಆಚರಣೆಯಾಗಿದೆ ಎಂದಿದ್ದಾರೆ.

ನ್ಯೂಯಾರ್ಕ್​ಗೆ ವಲಸೆ ಬಂದವರು, ಈ ರಜಾ ದಿನವನ್ನು ಕುಟುಂಬಗಳು, ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಆಚರಿಸುವ ಮೂಲಕ ಸಂಭ್ರಮಿಸುತ್ತಾರೆ. ಈ ದಿನದಂದು ರಜೆ ನೀಡುವುದು ಸವಾಲಿನಿಂದ ಕೂಡಿತ್ತು. ಆದರೂ ವಿಶೇಷವಾಗಿ ಸಮತೋಲಿತವಾದ ನಿರ್ಧಾರ ಕೈಗೊಂಡು ಈ ರಜೆ ಘೋಷಿಸಲಾಗಿದೆ. ಈ ಮೂಲಕ ಎಲ್ಲ ಸಮುದಾಯಗಳನ್ನು ಗೌರವದಿಂದ ಕಾಣುವುದು ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಾವು ಚಿಂತನಶೀಲ ಹೊಂದಾಣಿಕೆಗಳನ್ನು ಮಾಡಬೇಕಾಗಿದೆ ಎಂದರು.

ದೀಪಾವಳಿ ವೈವಿಧ್ಯತೆಯ ವಿಶಿಷ್ಟ ಹಬ್ಬವಾಗಿದೆ ಎಂಬುದನ್ನು ನೆನಪಿಸುತ್ತದೆ. ಈ ರಜಾ ದಿನವೂ ನಮ್ಮ ನಡುವೆ ಏಕತೆ ಮತ್ತು ಸಮೃದ್ಧತೆಯನ್ನುಂಟು ಮಾಡುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!