ಇದೇ ಮೊದಲ ಬಾರಿಗೆ ಕೊಪ್ಪಳದಲ್ಲಿ 18 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ: 8 ಮಂದಿ ಅರೆಸ್ಟ್,

ಹೊಸದಿಗಂತ ಕೊಪ್ಪಳ:

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದು, 8 ಮಂದಿಯನ್ನು ಬಂಧಿಸಿದ್ದಾರೆ. 18 ಲಕ್ಷ ರೂ. ಮೌಲ್ಯದ ಗಾಂಜಾ, 2 ಕಾರು, ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ‌.

ಕೇರಳ ರಾಜ್ಯದ ಕಣ್ಣೂರಿನ ಸೌಜೇಶ್(28), ಸಲೀಂ (27), ಬಾದಷಾ (32), ಬಳ್ಳಾರಿಯ ಮದನ (26), ದುರ್ಗಾಪ್ರಸಾದ್ (27), ಸೂರ್ಯಪ್ರತಾಪ ರೆಡ್ಡಿ (19), ಮಹ್ಮದ್ ಅಮೀದ್ (22), ಮಣಿಕಂಠ (23) ಬಂಧಿತ ಆರೋಪಿಗಳು.

ಈ ಸಂಬಂಧ ಬುಧವಾರ ಸಂಜೆ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಡಾ. ರಾಮ್ ಅರಸಿದ್ಧಿ ಅವರು, ಬುಧವಾರ ಮಧ್ಯಾಹ್ನ 11 ಗಂಟೆಗೆ ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂರ್ಯನಾಯಕನ ತಾಂಡಕ್ಕೆ ಹೋಗುವ ರಸ್ತೆಯ ಸರ್ಕಾರಿ ಐಟಿಐ ಕಾಲೇಜು ಮುಂಭಾಗದ ರಸ್ತೆಯಲ್ಲಿ 2 ಕಾರಿನಲ್ಲಿ ಹೈಡ್ರೋ ಗಾಂಜಾ ಮಾರಾಟ ಮಾಡಲು ಯತ್ನಿಸಿದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!