ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲೇ ಮೊದಲ ಬಾರಿಗೆ ಬೀದಿನಾಯಿಗಳಿಗೆ ಕಾಂಗ್ರೆಸ್ ಸರ್ಕಾರ ಬಾಡೂಟದ ಭಾಗ್ಯ ಕಲ್ಪಿಸುತ್ತಿದೆ. ಬೀದಿ ನಾಯಿಗಳಿಗೂ ಗ್ಯಾರಂಟಿ ಯೋಜನೆ ಕೊಡುತ್ತಿದೆ.
ಹೌದು, ಈ ಮಾತು ನಿಜ. ಈ ಮೂಲಕ ಬೀದಿ ನಾಯಿಗಳಿಗೆ ಮಾಂಸ, ಚಿಕನ್, ಎಗ್‌ರೈಸ್ ನೀಡಲಾಗುತ್ತದೆ. ಪಾಲಿಕೆಯ 8 ವಲಯಗಳಲ್ಲಿ ನಿತ್ಯ 600-700 ಬೀದಿ ನಾಯಿಗಳಿಗೆ ಬಾಡೂಟ ನೀಡಲು BBMP 2.80 ಕೋಟಿ ರೂ. ಟೆಂಡರ್ ಕರೆದಿದೆ.
ಕಾಂಗ್ರೆಸ್ ಸರ್ಕಾರದ ಈ ಬಾಡೂಟ ಭಾಗ್ಯಕ್ಕೆ ತೆರಿಗೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಈ ಐಡಿಯಾ ಮಾಡಿದ್ದಾರೆ. ನಾಯಿಗಳ ಮೇಲೆ ಪ್ರೀತಿ ಇರಲಿ, ಆದರೆ ಇದೆಲ್ಲಾ ಬೇಕಾ? ಎಂದು ಕಿಡಿಕಾರಿದ್ದಾರೆ.