ಹೊಸದಿಗಂತ ವರದಿ,ಹಾಸನ:
ಇಡೀ ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಹಾಸನ ವೈದ್ಯಕೀಯ ವಿಜ್ಮಾನ ಸಂಸ್ಥೆಯಲ್ಲಿ ಯಶಸ್ವಿಯಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ೧೩ ವರ್ಷದ ಬಾಲಕಿಯ ಅಂಗಾಗ ದಾನ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಹಿಮ್ಸ್ ಸಂಸ್ಥೆ ನಿರ್ದೇಶಕ ಡಾ. ರಾಜಣ್ಣ ತಿಳಿಸಿದರು.
ನಗರದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆದುಳು ನಿಷ್ಕ್ರಿಯಗೊಂಡು ತನ್ನ ಜೀವವೇ ಕೊನೆಯಾಗುವ ಹಂತದಲ್ಲಿರುವ ವ್ಯಕ್ತಿ ಅಂಗಾಂಗ ದಾನ ಪ್ರಕ್ರಿಯೆಗೆ ಒಳಗಾದರೆ ಕನಿಷ್ಠ ಐದು ಜೀವಗಳನ್ನು ಉಳಿಸಬಹುದು. ಇಂತಹ ಒಂದು ಪ್ರಕ್ರಿಯೆಯನ್ನು ಈ ಹಿಂದೆ ಹಲವು ಭಾರಿ ನಡೆಸಲಾಗಿತ್ತು. ಆದರೆ ಯಾವುದು ಅಷ್ಟಾಗಿ ಯಶಸ್ವಿ ಕಂಡಿರಲಿಲ್ಲ. ಈ ಅಂಗಾಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದು ರಾಜ್ಯದ ಮೊದಲ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು.
ಮೊದಲಿಗೆ ಅಪಘಾತದಿಂದ ಮೆದುಳು ನಿಷ್ಕ್ರಯಗೊಂಡಿದ್ದ ೧೩ ವರ್ಷದ ಬಾಲಕಿಯ ಅಂಗಾoಗವನ್ನು ಪೋಷಕರು ದಾನ ಮಾಡಿದ್ದು ಪೋಷಕರಿಗೆ ಶ್ಲಾಘನೆ ವ್ಯಕ್ತಪಡಿಸುತ್ತೇನೆ. ತಿಪಟೂರು ತಾಲೂಕಿನ ಹಳೇ ಪಾಳ್ಯ ಗ್ರಾಮದ ವಸಂತ ಕುಮಾರ್ ದಂಪತಿಯ ಪುತ್ರಿ ಚಂದನ (೧೩) ಜು. ೨೩ ಸೈಕಲ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ತೀವೃ ಗಾಯಗೊಂಡಿದ್ದರು. ಚಿಕಿತ್ಸೆಗೆ ತಿಪಟೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಹಾಸನದ ಖಾಸಗಿ ಆಸ್ಪತ್ರೆಗೆ ಜು.೨೭ ರಂದು ಕರೆ ತರಲಾಗಿತ್ತು. ಅಪಘಾತದಿಂದ ಗಾಯಗೊಂಡಿದ್ದ ಬಾಲಕಿ ಮೆದುಳು ನಿಷ್ಕ್ರಿಯಗೊಂಡಿತ್ತು. ನಿಷ್ಕ್ರಿಯಗೊಂಡಿದ್ದ ಬಾಲಕಿಯ ಪೋಷಕರಿಗೆ ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿ ಒಪ್ಪಿಗೆ ಪಡೆದು ಹಿಮ್ಸ್ ಸಿಬ್ಬಂದಿ ಕೂಡಲೇ ಬಾಲಕಿಯ ಮೃತದೇಹವನ್ನು ಹಿಮ್ಸ್ಗೆ ರವಾನಿಸಿ ಅಂಗಾಂಗ ಸೋಟೋ ಕಾಯ್ದೆ ಅಡಿ ಶಸ್ತç ಚಿಕಿತ್ಸೆಗೆ ಸಿದ್ದಪಡಿಸಿಕೊಳ್ಳಲಾಯಿತು. ಹಿಮ್ಸ್ ಸರ್ಜನ್ ತಂಡದೊoದಿಗೆ ಅಂಗಾಂಗ ಶಸ್ತ್ರ ಚಿಕಿತ್ಸೆಗೆ ಬೆಂಗಳೂರಿನ ಟ್ರಾನ್ಸ್ಪ್ಲಾಂಟ್ ಸರ್ಜನ್ ಡಾ. ರಾಜೇಗೌಡ ಎಂಬುವವರನ್ನು ಕರೆಸಿ ಕೂಡಲೇ ಜು. ೨೯ ರ ಬೆಳಗ್ಗೆ ೩.೩೦ ರಿಂದ ೬.೩೦ ರ ಸತತ ೩ ಗಂಟೆಗಳ ಕಾಲ ಶಸ್ತçಚಿಕಿತ್ಸೆ ಮಾಡುವ ಯಶಸ್ವಿಗೊಳಿಸಲಾಯಿತು ಎಂದು ತಿಳಿಸಿದರು.
ಮೆದುಳು ಮಾನವನ ಅಂಗಾoಗಳಿಗೆ ಮಾಸ್ಟರ್ ಆಗಿದ್ದು ಮೃತ ಬಾಲಕಿಯಿಂದ ಹೃದಯ, ಲಿವರ್, ಕಣ್ಣು, ಕಿಡ್ನಿ ಸೇರಿದಂತೆ ೫ ಅಂಗಾಂಗಳನ್ನು ಪಡೆದು ತಕ್ಷಣ ಸರ್ಕಾರ ನಿಗಧಿಪಡಿಸಿದ್ದ ಮೈಸೂರಿನ ಕಂಪನಿಗಳಿಗೆ ರವಾನೆ ಮಾಡಿದ್ದು ಅಗತ್ಯವಿದ್ದ ರೋಗಿಗಳಿಗೆ ಅಂಗಾಂಗವನ್ನು ಕಸಿ ಮಾಡಲಾಗಿದೆ ಎಂದರು.
ಈ ವೇಳೆ ಡಾ. ರಾಮನಾಥ್, ಡಾ. ರಾಘವೇಂದ್ರಪ್ರಸಾದ್, ಡಾ. ಅನುಪಮಾ, ಡಾ. ವಿಶ್ವನಾಥ್, ಡಾ. ಆಲೇಶ್ ಸೇರಿದಂತೆ ಇತರರು ಹಾಜರಿದ್ದರು.