ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಧಿವೇಶನದ ಎರಡನೇ ದಿನವಾದ ಇಂದು ವಿಧಾನಸಭೆ ಕಾರ್ಯದರ್ಶಿ ಕಚೇರಿಯಲ್ಲಿ ಸ್ಪೀಕರ್ ಸ್ಥಾನಕ್ಕೆ ಶಾಸಕ ಯು.ಟಿ. ಖಾದರ್ ನಾಮಪತ್ರ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ್ದು, ಸಚಿವ ಸ್ಥಾನ ಎಲ್ಲರಿಗೂ ಸಿಗುತ್ತದೆ ಆದರೆ ಸ್ಪೀಕರ್ ಸ್ಥಾನ ಎಲ್ಲರಿಗೂ ಸಿಗೋದಿಲ್ಲ. ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ, ಈಗ ಸ್ಪೀಕರ್ ಆಗಿ ಎಂದು ನಾಯಕರು ಹೇಳಿದ್ದಾರೆ. ನಾನು ಒಪ್ಪಿದ್ದೇನೆ. ಹೈ ಕಮಾಂಡ್ ಸೂಚಿಸಿದಂತೆ ನಡೆಯುತ್ತೇನೆ, ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದಿದ್ದಾರೆ.