ದಿನಭವಿಷ್ಯ: ವೃತ್ತಿಪರ ವ್ಯವಹಾರಗಳಿಗೆ ಲಾಭದಾಯಕ ದಿನ

ಮೇಷ
ಹೆಚ್ಚು ಒತ್ತಡದಿಂದ ವಿಚಲಿತರಾಗುವ ಪ್ರಸಂಗ. ಗುರಿಯಿಂದ ಮನಸ್ಸು ಕದಲದಿರಲಿ. ಹೇಳಲಾಗದ ತಲ್ಲಣ ಬಾಽಸಲಿದೆ. ಧ್ಯಾನ ಸಹಕಾರಿ.
ವೃಷಭ
ಗುರಿ ಸಾಧನೆ. ಕಠಿಣ ಪರಿಸ್ಥಿತಿ ಎದುರಿಸಬಲ್ಲ ದೃಢ ಮನೋಭಾವ ಪ್ರದರ್ಶಿಸುವಿರಿ.  ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅವಶ್ಯ.
ಮಿಥುನ
ಈ ದಿನ ನಿಮ್ಮ ಬದುಕಲ್ಲಿ ಮಹತ್ವದ ಬದಲಾವಣೆ ತಂದೀತು. ಅದೃಷ್ಟ ನಂಬಿ ಕೂರದಿರಿ. ಪ್ರಯತ್ನಕ್ಕಷ್ಟೇ ಫಲವಿದೆ. ಸಂಬಂಧ ವೃದ್ಧಿ.
ಕಟಕ
ವೃತ್ತಿ ಕ್ಷೇತ್ರದಲ್ಲಿ ಸಮಸ್ಯೆ ಎದುರಿಸುವಿರಿ. ಅಸಹಕಾರ. ಕೌಟುಂಬಿಕ ಭಿನ್ನಮತ. ಸಂಗಾತಿ ಜತೆಗೆ ಹೊಂದಾಣಿಕೆ ಮುಖ್ಯ. ಆರ್ಥಿಕ ಒತ್ತಡ.
ಸಿಂಹ
ವೃತ್ತಿಯಲ್ಲಿ ಹೆಚ್ಚು ಸವಾಲು. ಬದಲಾವಣೆಗೆ ಹೊಂದಿಕೊಳ್ಳಿ. ಆರ್ಥಿಕ ಪರಿಸ್ಥಿತಿ ಸರಿಯಾಗಿ ನಿಭಾಯಿಸಿ. ಅನವಶ್ಯ ಖರ್ಚು ನಿಯಂತ್ರಿಸಿ.
ಕನ್ಯಾ
ಸಣ್ಣ ವಿಷಯದ ಕುರಿತು ಅತಿಯಾಗಿ ಚಿಂತಿಸಿ ಮನಸ್ಸು ಹಾಳು ಮಾಡಿಕೊಳ್ಳಬೇಡಿ. ಅನಿರೀಕ್ಷಿತ ವೆಚ್ಚ ಬರಲಿದೆ. ಕೌಟುಂಬಿಕ ಸಹಕಾರ
ತುಲಾ
ಕಡಿಮೆ ಪ್ರಯತ್ನ ದಲ್ಲೂ ಉತ್ತಮ ಫಲ ಸಿಗಲಿದೆ. ಹೊಸ ಸವಾಲು ಎದುರಿಸಲು ಸಜ್ಜಾಗಿ.ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ವೃಶ್ಚಿಕ
ಉದ್ಯೋಗದಲ್ಲಿ ನಿಮಗೆ ಪೂರಕ ಪರಿಸ್ಥಿತಿ. ಕೆಲದಿನಗಳ ಉದ್ವಿಗ್ನತೆ ನಿವಾರಣೆ. ಖರ್ಚು ಹೆಚ್ಚಳ. ಕುಟುಂಬದಲ್ಲಿ ಭಿನ್ನಮತ ಉಂಟಾದೀತು.
ಧನು
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಮೇಲಧಿಕಾರಿಗಳ ಅವಕೃಪೆಗೆ ಗುರಿಯಾಗುವಿರಿ. ಭಾವನಾತ್ಮಕ ಏರುಪೇರು. ಅಜೀರ್ಣ ಸಂಭವ.
ಮಕರ
ದಿಕ್ಕು ತಪ್ಪಿದ ಭಾವ. ನೀವು ಎಣಿಸಿದಂತೆ ಕಾರ್ಯ ಸಾಗದೆ ಹತಾಶೆ. ದೊಡ್ಡ ಮಟ್ಟದ ಹೂಡಿಕೆ ಮಾಡಬೇಡಿ. ನಿರೀಕ್ಷಿತ ಫಲ ದೊರಕದು.
ಕುಂಭ
ಕೆಲಸದ ಒತ್ತಡ ಕಡಿಮೆ. ನಿರಾಳ ಮನಸ್ಸು. ನಿಮ್ಮ ನಿರ್ಧಾರ ಉತ್ತಮ ಫಲ ನೀಡಲಿದೆ. ಆರೋಗ್ಯ ಸಮಸ್ಯೆಯಿದ್ದರೆ ನಿವಾರಣೆ. ಪ್ರವಾಸದ ಸಾಧ್ಯತೆ.
ಮೀನ
ಉತ್ಸಾಹದ ದಿನ. ಕೌಟುಂಬಿಕ ಸಾಮರಸ್ಯ ಕಾಪಾಡಲು ಸಫಲ. ಆರ್ಥಿಕ ಪ್ರಗತಿ. ಸ್ವಂತ ಉದ್ಯಮದಲ್ಲಿ ಉನ್ನತಿ. ಆಪ್ತ ಬಂಧು ಭೇಟಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!