ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಚುನಾವಣೆಯಲ್ಲಿ ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದು ವಿದೇಶಗಳಿಗೂ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ (BJP’s national convention ) ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ , ಆಯೇಗಾ ತೋ ಮೋದಿ ಹೈ (ಮೋದಿ ಮರಳಿಬರುತ್ತಾರೆ ) ಎಂಬ ಸಂಗತಿ ವಿದೇಶಗಳಿಗೂ ತಿಳಿದಿದೆ . ಚುನಾವಣೆಗಳು ಇನ್ನೂ ನಡೆಯಬೇಕಾಗಿದೆ ಆದರೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ನನಗೆ ವಿದೇಶ ಪ್ರವಾಸಕ್ಕಾಗಿ ಈಗಾಗಲೇ ಆಹ್ವಾನಗಳಿವೆ. ಇದರ ಅರ್ಥವೇನು? ಇದರರ್ಥ ವಿಶ್ವದ ವಿವಿಧ ರಾಷ್ಟ್ರಗಳು ಬಿಜೆಪಿ ಸರ್ಕಾರದ ಮರಳುವಿಕೆಯ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿವೆ. ಅವರಿಗೂ ತಿಳಿದಿದೆ ಎಂಬುದಾಗಿ ಹೇಳಿದರು.
ನಾನು ಅಧಿಕಾರವನ್ನು ಅನುಭವಿಸಲು ಮೂರನೇ ಅವಧಿಗೆ ಬಯಸುತ್ತಿಲ್ಲ, ರಾಷ್ಟ್ರಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ . ನಾನು ನನ್ನ ಮನೆಯ ಬಗ್ಗೆ ಯೋಚಿಸಿದ್ದರೆ, ಕೋಟ್ಯಂತರ ಜನರಿಗೆ ಮನೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು.