April 6, 2026
Monday, April 6, 2026
spot_img

ವಿದೇಶಿ ಪಾಸ್‌ಪೋರ್ಟ್‌ ಆರೋಪ: ಕಾಂಗ್ರೆಸ್ ಗೆ ಅಸ್ಸಾಂ ಸಿಎಂ ಪತ್ನಿ ರಿನಿಕಿ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧ ಕಾಂಗ್ರೆಸ್ ವಿದೇಶಿ ಪಾಸ್‌ಪೋರ್ಟ್‌ಗಳು ಮತ್ತು ದುಬೈನಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಮಾಡಿದ್ದು , ಇದಕ್ಕೆ ತಿರುಗೇಟು ನೀಡಿದ ರಿನಿಕಿ,ಈ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು ಎಂದು ಹರಿಹಾಯ್ದಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ರಿನಿಕಿ, ಈ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ನಕಲಿ ದಾಖಲೆಗಳನ್ನು ಆಧರಿಸಿವೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಾಯಕರ ಹೇಳಿಕೆಗಳು ನಗೆಪಾಟಲಿನ ಸಂಗತಿ ನನಗಾಗಲಿ, ನನ್ನ ಪತಿ ಅಥವಾ ಮಕ್ಕಳಿಗಾಗಲಿ ದುಬೈ ಸೇರಿದಂತೆ ವಿದೇಶದ ಯಾವುದೇ ಭಾಗದಲ್ಲಿ ಆಸ್ತಿ ಅಥವಾ ವ್ಯಾಪಾರ ಹಿತಾಸಕ್ತಿಗಳಿಲ್ಲ . ಈ ಎಲ್ಲಾ ಕಾಂಗ್ರೆಸ್‌ನ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಉದ್ದೇಶಪೂರ್ವಕವಾಗಿ ಜನರನ್ನು ದಾರಿತಪ್ಪಿಸುವ ಪ್ರಯತ್ನ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಗೌರವ್ ಗೊಗೊಯ್​ಗೆ ನೇರ ಸವಾಲು ಹಾಕಿದ ರಿನಿಕಿ, ನಿಮ್ಮ ಪತ್ನಿ ಪಾಕಿಸ್ತಾನದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ವಿವರಗಳನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !