ವಿದೇಶಿ ಮಹಿಳೆಗೆ ಅಪರಿಚಿತ ಬೋಟ್ ಡಿಕ್ಕಿ: ಗಂಭೀರ ಗಾಯ

ಹೊಸದಿಗಂತ ವರದಿ, ಗೋಕರ್ಣ:

ಸಮುದ್ರದಲ್ಲಿ ಈಜಾಡುತ್ತಿದ್ದ ವಿದೇಶಿ ಮಹಿಳೆಗೆ ಅಪರಿಚಿತ ಬೋಟ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಶನಿವಾರ ಮುಂಜಾನೆ ಇಲ್ಲಿನ ಮುಖ್ಯ ಕಡಲತೀರದ ಕರಿಯಪ್ಪನಕಟ್ಟೆ ಬಳಿ ನಡೆದಿದೆ.

ಬೋಟ್ ದಿಕ್ಕಿ ಹೊಡೆಸಿ ಪರಾರಿಯಾಗಿದೆ. ರಷ್ಯಾ ದೇಶದ ತಾತಿಯಾನ ಒಬುಕೋವಾ(೬೨) ಗಾಯಗೊಂಡ ವಿದೇಶಿ ಮಹಿಳೆಯಾಗಿದ್ದು, ತಕ್ಷಣ ೧೦೮ ಅಂಬ್ಯಲೆನ್ಸ ಮೂಲಕ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಭುಜ ಮತ್ತು ತಲೆಗೆ ಗಂಭೀರ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂಬ ಮಾಹಿತಿ ಬಂದಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ.

ಈ ಪ್ರವಾಸಿ ತಂಗಿದ್ದ ವಸತಿ ಗೃಹದ ಮಾಲಕರು ಮತ್ತಿತರರು ಆಸ್ಪತ್ರೆಗೆ ತೆರಳಿ ನೆರವಾಗಿದ್ದಾರೆ. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!