March 26, 2026
Thursday, March 26, 2026
spot_img

ತುಂಗಾ ನದಿ ತೀರದಲ್ಲಿ ವಿದೇಶಿಗರ ಜಾಲಿ ಪಾರ್ಟಿ, ಹೋಸ್ಟ್‌ ಮಾಡಿದವರ ವಿರುದ್ಧ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊಪ್ಪಳ ಜಿಲ್ಲೆಯಲ್ಲಿ ವಿದೇಶಿಗರ ಅನಧಿಕೃತ ಪಾರ್ಟಿ ಮತ್ತೆ ನಡೆದಿದೆ.

ಗಂಗಾವತಿ ಸಮೀಪದ ತುಂಗಭದ್ರಾ ನದಿ ತೀರದಲ್ಲಿ ಪೊಲೀಸರ ಅನುಮತಿ ಇಲ್ಲದೆ ಓಪನ್‌ ಏರ್‌ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಲಾಗಿದೆ.

ಈ ಪಾರ್ಟಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪೊಲೀಸರು ನೋಡಿದ್ದಾರೆ. ಮುನಿರಾಬಾದ್‌ ಪೊಲೀಸ್‌ ಠಾಣಾವ್ಯಾಪ್ತಿಯಲ್ಲಿ ಈ ಪಾರ್ಟಿ ನಡೆದಿದೆ. ವಿದೇಶಿ ಪ್ರಜೆಗಳು ಬಂಡೆಗಳ ಮೇಲೆ ಕುಳಿತು, ಕುಣಿದು ಕುಪ್ಪಳಿಸಿದ್ದಾರೆ. ದಿ ಹಂಪಿ ಕೆಫೆ ಇದನ್ನು ಆಯೋಜಿಸಿದೆ. ಇದರ ಮಾಲೀಕರು ಹಾಗೂ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಾಗಿದೆ.

ತೆರೆದ ಜಾಗದಲ್ಲಿ ಕಾರ್ಯಕ್ರಮ ನಡೆಸಿ ನಿಯಮ ಉಲ್ಲಂಘಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನೋಟಿಸ್ ಜಾರಿಗೊಳಿಸಲಾಗಿದೆ. ರೆಸಾರ್ಟ್‌ನಲ್ಲಿ ನಿಯಮಬಾಹಿರ ಚಟುವಟಿಕೆಗಳ ಪರಿಶೀಲನೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಜಿಲ್ಲಾಡಳಿತವೂ ಟಾಸ್ಕ್ ಫೋರ್ಸ್ ರಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !