ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಕಿ ಖರೀದಿಸಲು ಬಂದ ಶಂಕಿತ ನಕ್ಸಲ್ ತಂಡದ ಮೇಲೆ ಕೇರಳದ ಕಣ್ಣೂರಿನ ಪೈವೂರಿನಲ್ಲಿ ಕಾಡಾನೆ ದಾಳಿ ನಡೆಸಿದೆ.
ಈ ಘಟನೆಯಲ್ಲಿ ಓರ್ವ ಶಂಕಿತ ನಕ್ಸಲ್ ಗಾಯಗೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಲ್ಲಿನ ಕಂಜಿರಕೊಲ್ಲಿ ಕಾಲೋನಿಗೆ ಅಕ್ಕಿ ಮತ್ತಿತರ ಸಾಮಾಗ್ರಿಗಳನ್ನು ಖರೀದಿಸಲು ಬಂದಿದ್ದ ವೇಳೆ ಈ ಗುಂಪಿನ ಮೇಲೆ ಕಾಡಾನೆ ದಾಳಿ ನಡೆಸಿದೆ.
ಈ ನಡುವೆ ಗಾಯಗೊಂಡ ಸುರೇಶ್ ಎಂಬಾತನನ್ನು ಪೋಲೀಸರು ಬಂಧಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಈತ ಚಿಕ್ಕಮಗಳೂರಿನ ನಿವಾಸಿ ಎಂದು ಗೊತ್ತಾಗಿದೆ. ತಂಡದಲ್ಲಿ ಆರು ಜನರಿದ್ದರು ಎನ್ನಲಾಗಿದ್ದು, ಇತರರು ಪರಾರಿಯಾಗಿದ್ದಾರೆ ಎಂದು ಇಲಾಖಾ ಮೂಲಗಳು ತಿಳಿಸಿವೆ.