ಹೊಸದಿಗಂತ ವರದಿ ಮೈಸೂರು :
ನಗರದ ಆರ್ ಬಿಐ ಹಿಂಭಾಗದಲ್ಲಿ ಇರುವ ಶ್ಯಾದನಹಳ್ಳಿಯಲ್ಲಿ ಸುಮಾರು ಎರಡರಿಂದ ಮೂರು ವರ್ಷದ ಗಂಡು ಚಿರತೆಯು ತೋಟದಲ್ಲಿ ಇರಿಸಿದ್ದ ಬೋನಿಗೆ ಭಾನುವಾರ ರಾತ್ರಿ ಸಿಕ್ಕಿಬಿದ್ದಿದೆ.
ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ವಲಯ ಅಧಿಕಾರಿ ಆರ್‌ಎಫ್ಒ ಸುರೇಂದ್ರ.ಕೆ ಮತ್ತು ಸಿಬ್ಬಂದಿಯವರು ಆಗಮಿಸಿ, ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲು ಇಲ್ಲಿಂದ ರವಾನಿಸಿದ್ದಾರೆ.