ಹೊಸದಿಗಂತ ವರದಿ,ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಳಿದೇವನ ಹೊಸೂರು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಈ ಭಾಗದ ರೈತರ ಅಡಿಕೆ ಗಿಡಗಳನ್ನು ಮತ್ತು ಬೆಳೆಗಳನ್ನು ತಿಂದು ತುಳಿದು ಸಂಪೂರ್ಣವಾಗಿ ನಾಶ ಮಾಡಿವೆ.
ಆನೆಕಾಡಿನ ಕಡೆಯಿಂದ ಬಂದಿರುವ ಕಾಡಾನೆಗಳು ಬೆಂಡೆಬೆಟ್ಟದ ಮೀಸಲು ಅರಣ್ಯ ಪ್ರದೇಶದ ಮೂಲಕ ಬಂದು ಹಾರಂಗಿ ನದಿಯನ್ನು ದಾಟಿ ಸಮೀಪದ ಗ್ರಾಮವಾದ ಕಾಳಿದೇವನ ಹೊಸೂರು ಗ್ರಾಮದ ಶಿವ ಪ್ರಕಾಶ್ ಎಂಬವರ ಜಮೀನಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಷ್ಟಪಡಿಸಿವೆ.
ಸ್ಥಳಕ್ಕೆ ಹುದುಗೂರು ಉಪ ವಲಯ ಅರಣ್ಯ ಅಧಿಕಾರಿ ಸತೀಶ್ ಮತ್ತು ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಹಾರ ನೀಡುವ ಭರವಸೆಯಿತ್ತಿದ್ದಾರೆ.