ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಘಟ್ಟದ ತಪ್ಪಲಿನ ದತ್ತಪೀಠದ ಬಳಿಯ ಅಪರೂಪದ ಶೋಲಾ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ದತ್ತಪೀಠ, ಮುಳ್ಳಯ್ಯನಗಿರಿ, ಕವಿಕಲ್‍ಗಂಡಿ ತಪ್ಪಲಿನಲ್ಲಿರುವ ಹಲವಾರು ಸಸ್ಯಗಳು ಸುಟ್ಟು ಕರಕಲಾಗಿವೆ.
ಸೋಮವಾರ ಸಂಜೆ ಕಾಣಿಸಿಕೊಂಡ ಬೆಂಕಿ ಸುಮಾರು ರಾತ್ರಿವರೆಗೂ ಹೊತ್ತಿ ಉರಿದಿದೆ. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆಗ್ನಿಶಾಮಕ ವಾಹನ ಹೋಗದ ಕಡೆಗಳಲ್ಲಿ ಅಧಿಕಾರಿಗಳು ಸೊಪ್ಪಿನ ರೆಂಬೆ ಹಾಗೂ ಕೆಲ ಆಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಬಳಸಿ ರಾತ್ರಿ ವರೆಗೂ ಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ.
ಈ ಅರಣ್ಯ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಮಾತ್ರ ಹೆಚ್ಚಾಗಿ ನೋಡಬಹುದು. ಈ ಕಾಡುಗಳು ನೀರನ್ನ ಹಿಡಿದಿಟ್ಟುಕೊಂಡು ವರ್ಷಪೂರ್ತಿ ಹರಿಸುತ್ತವೆ. ಶೋಲಾ ಅರಣ್ಯ ಇರುವ ಕಡೆ ಕಾಡು-ಕಾಡುಪ್ರಾಣಿಗಳು ಕೂಡ ಸಮೃದ್ಧವಾಗಿರುತ್ತವೆ. ಆದರೆ, ಕಾಡ್ಗಿಚ್ಚಿಗೆ ಶೋಲಾ ಕಾಡಿನ ಹಲವಾರು ಮರಗಳು ನಾಶವಾಗಿದೆ.