ಅರಣ್ಯಾಧಿಕಾರಿ ನಿವಾಸಕ್ಕೆ ದಾಳಿ: ಚಿನ್ನದ ನಾಣ್ಯಗಳು, 1.44 ಕೋಟಿ ಗರಿ ಗರಿ ನೋಟುಗಳು ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರಣ್ಯ ಅಧಿಕಾರಿಗೆ ಸಂಬಂಧಿಸಿದ 6 ಸ್ಥಳಗಳ ಮೇಲೆ ಒಡಿಶಾ ವಿಜಿಲೆನ್ಸ್​ ವಿಭಾಗವು ದಾಳಿ ಈ ವೇಳೆ ಪತ್ತೆಯಾದ ಹಣ ಮತ್ತು ಆಸ್ತಿಯನ್ನು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಡೆಪ್ಯುಟಿ ರೇಂಜರ್ ರಾಮ ಚಂದ್ರ ನೇಪಕ್​ಗೆ ಸಂಬಂಧಿಸಿದ 6 ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನೇಪಕ್ ಜೈಪುರ ವಲಯ ಅರಣ್ಯ ಅಧಿಕಾರಿ ಆಗಿದ್ದಾರೆ. ಈ ವೇಳೆ 4 ಚಿನ್ನದ ಬಿಸ್ಕಟ್​​ಗಳು, ಒಂದೊಂದು 10 ಗ್ರಾo ತೂಕ ಇರುವ 16 ಬಂಗಾರದ ನಾಣ್ಯಗಳು ಪತ್ತೆಯಾಗಿವೆ.

ಇನ್ನು ದಾಳಿಯನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ. ದಾಳಿ ವೇಳೆ ಬಂಗಾರದ ವಸ್ತುಗಳು ಮಾತ್ರವಲ್ಲದೇ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ.

ಜೈಪುರದ ಅಪಾರ್ಟ್​​ಮೆಂಟ್ ಒಂದರಲ್ಲಿ ಬಚ್ಚಿಟ್ಟಿದ್ದ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಹಣವನ್ನು ನೋಡಿದ ಅಧಿಕಾರಿಗಳು ಅದನ್ನು ಎಣಿಸಲು ಮಷಿನ್ ಸಹಾಯ ಪಡೆದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, 1.44 ಕೋಟಿ ಹಣ ಸಿಕ್ಕಿದೆ.

ಎರಡು ಕಾರಗಳು, ನಾಲ್ಕು ಬೈಕ್​ ಕೂಡ ಸೀಜ್ ಮಾಡಿದ್ದಾರೆ. ಓರ್ವ ಸರ್ಕಾರಿ ಅಧಿಕಾರಿ ಆದಾಯಕ್ಕೂ ಮೀರಿ ಹಣ, ಆಸ್ತಿ ಸಂಪಾದನೆ ಮಾಡಿ ಈಗ ಸಿಕ್ಕಿಬಿದ್ದಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!