ಕಾಡಾನೆ ತುಳಿತಕ್ಕೆ ಕಾರ್ಮಿಕ ಸಾವು – ಬೆಳೆಗಾರರ ಆಕ್ರೋಶ

ಹೊಸದಿಗಂತ ವರದಿ ಬೇಲೂರು :

ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಬರುವ ಸಂದರ್ಭದಲ್ಲಿ ಏಕಾಏಕಿ ಕಾಡಾನೆಯೊಂದು ಕಾಫಿ ತೋಟದ ಕೂಲಿ ಕಾರ್ಮಿಕನ್ನು ಸೊಡಲಿನಿಂದ ಅಪ್ಪಳಿಸಿದ ಪರಿಣಾಮವಾಗಿ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದು. ಜೊತೆಗೆ ಇದ್ದ ಇನ್ನೊಬ್ಬ ಕಾಡಾನೆಯಿಂದ ತಪ್ಪಿಸಿಕೊಂಡಿದ್ದಾರೆ. ಕಾಡಾನೆಯ ದಾಳಿಯ ಬಗ್ಗೆ ಬೆಳೆಗಾರರು ತೀವ್ರ ಆತಂಕದಲ್ಲಿ ಶಾಶ್ವತ ಪರಿಹಾರ ನೀಡುವಂತೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಬಿಕ್ಕೋಡು ಹೋಬಳಿ ಮತ್ತಾವರ ಗ್ರಾಮದ ವಸಂತ ಬಿನ್ ಈರಯ್ಯ (45) ಕಾಡಾನೆ ದಾಳಿ ಸಿಕ್ಕಿ ಮೃತ ಪಟ್ಟ ನತದೃಷ್ಟವಾಗಿದ್ದು, ಎಂದಿನಂತೆ ಮತ್ತಾವರ ಗ್ರಾಮದ ವಸಂತ್ ಮತ್ತು ಆತನ ಸ್ನೇಹಿತ ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮಬ್ಬುಗತ್ತಿನಲ್ಲಿ ಸಂಜೆ ಸುಮಾರು ೮ ಗಂಟೆ ವೇಳೆ ಮನೆಗೆ ವಾಪಸು ಬರುತ್ತಿರುವ ವೇಳೆ ಕಾಫಿ ತೋಟದಿಂದ ಏಕಾಏಕಿ ಧಾವಿಸಿದ ಕಾಡಾನೆ ವಸಂತ್ ದಾಳಿ ನಡೆಸಿಲು ಮುಂದಾದ ಸಂದರ್ಭದಲ್ಲಿ ವಸಂತ್ ತಪ್ಪಿಸಿಕೊಳ್ಳುವ ಹೊತ್ತಿಗೆ ಮದವೇರಿದ ಆನೆ ತನ್ನ ಸೊಡಲಿನಿಂದ ಬಲವಾಗಿ ವಸಂತನ ತೊಡೆಯ ಭಾಗಕ್ಕೆ ಅಪ್ಪಳಿಸಿದ್ದು, ವಸಂತ್ ಹೊಡೆತ ತಾಳದೆ ಸ್ಥಳದಲ್ಲಿ ಮೃತ ಪಟ್ಟಿದ್ದಾನೆ ಎನ್ನಲಾಗಿದೆ. ಇನ್ನೂ ಆತನ ಸ್ನೇಹಿತ ಅಲ್ಲಿಂದ ಓಡಿ ಹೋಗಿ ಹತ್ತಿರದ ಗ್ರಾಮಸ್ಥರನ್ನು ಕರೆದುಕೊಂಡು ಬರುವ ವೇಳೆಗೆ ವಸಂತ್ ಪ್ರಾಣ ಪಕ್ಷಿ ಹಾರಿತ್ತು. ಈ ಘಟನೆಯಿಂದ ಸುತ್ತಲಿನ ಗ್ರಾಮಸ್ಥರು ತೀವ್ರ ಆತಂಕದಲ್ಲಿ ಇಡೀ ರಾತ್ರಿ ನಿದ್ರೆ ಇಲ್ಲದೆ ಕಾಲ ಕಳೆದಿದ್ದಾರೆ. ಸರ್ಕಾರ ನಮಗೆ ಶಾಶ್ವತ ಪರಿಹಾರ ನೀಡಬೇಕು ಇಲ್ಲವಾದರೆ ನಾವೇ ವಲಸೆ ಹೊಗುವ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ‌ಮುಖಂಡ ಗ್ರಾನೈಟ್ ರಾಜಶೇಖರ್, ಮಲೆನಾಡಿನಲ್ಲಿ ಮಾನವ – ಪ್ರಾಣಿ ಸಂಘರ್ಷ ಮುಂದುವರೆದ ಪರಿಣಾಮದಿಂದ ಈಗಾಗಲೇ ಏಳೆಂಟು ಮನುಷ್ಯರ ಧಾರುಣ ಸಾವು ನಿಜಕ್ಕೂ ಶೋಚನೀಯ.ಸರ್ಕಾರದ ಮತ್ತು ಸಂಬಂಧಿಸಿದ ಅರಣ್ಯ ಇಲಾಕೆ ಈ ಬಗ್ಗೆ ಕಾರ್ಯೋಮ್ಮುಖವಾಗಬೇಕಿದೆ. ತಾಲ್ಲೂಕಿನ ನಂಡಗೊಡನಹಳ್ಳಿ ಅಕ್ರಮ ಮರ‌ಕಡಿದ ಪ್ರಕರಣದಲ್ಲಿ ಅರಣ್ಯ ಇಲಾಕೆ ಅಧಿಕಾರಿಗಳನ್ನು ಸರ್ಕಾರ ಅಮಾನತ ಪಡಿಸಲಾಗಿತ್ತು.ಇದ್ದರಿಂದ ಕಾಡಾನೆ ಮಾಹಿತಿ ಯಾರಿಗೂ ತಿಳಿಸುತ್ತಿಲ್ಲ.ಈ ಕಾರಣದಿಂದಲೇ ಕಾಡಾನೆಯಿಂದ ಮತ್ತಾವರ ಗ್ರಾಮದ ವಸಂತ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ನಾನು ಸ್ವತಃ ಅರಣ್ಯ ಮಂತ್ರಿಗಳಾದ ಈಶ್ವರ್ ಖಂಡ್ರೆರವರಲ್ಲಿ ಖುದ್ದು ಮಾತನಾಡಿದ್ದು ಅವರು ಹೈದರಾಬಾದ್ ನಲ್ಲಿರುವೆ ಸದ್ಯ ನಮ್ಮ ಉನ್ನತಾಧಿಕಾರಿಗಳು ಕ್ರಮ ವಹಿಸಿದ್ದಾರೆ. ವಿಶೇಷವಾಗಿ ಕಾಡಾನೆ ಸ್ಥಳಾಂತರ ಮುಂದುವರೆಸುವ ಬಗ್ಗೆ ವಿಶ್ವಾಸದ ಮಾತುಗಳನ್ನು ಆಡಳಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!