ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮ್ಯಾಟೊ ಇಲ್ಲದೆ ಯಾವ ಅಡುಗೆ ಸಾಧ್ಯ ಹೇಳಿ? ಪ್ರತಿ ಊಟ, ತಿಂಡಿ, ಸಲಾಡ್ ಎಲ್ಲಕ್ಕೂ ಟೊಮ್ಯಾಟೊ ಬೇಕೇ ಬೇಕು.
ಹೆಚ್ಚು ಟೊಮ್ಯಾಟೊ ಬೇಕಾಗುವ ಟೊಮ್ಯಾಟೊ ಗೊಜ್ಜು, ಟೊಮ್ಯಾಟೊ ಬಾತ್ನ್ನು ಬೆಂಗಳೂರಿಗಳು ಸ್ವಲ್ಪ ದಿನ ಮರೆಯಬೇಕು, ಯಾಕಂದ್ರೆ ಟೊಮ್ಯಾಟೊ ಬೆಲೆ ಏಕಾಏಕಿ ಏರಿಕೆಯಾಗಿದೆ. ಒಂದೇ ವಾರದಲ್ಲಿ ಮೂರು ಪಟ್ಟು ರೇಟ್ ಜಾಸ್ತಿಯಾಗಿದ್ದು, ಟೊಮ್ಯಾಟೊ ಮುಟ್ಟೋಕೂ ಹುಳಿಯಾಗಿದೆ.
ಕಳೆದ ವಾರ ಕೆ.ಜಿ.ಗೆ 30 ರೂಪಾಯಿ ಇದ್ದ ಟೊಮ್ಯಾಟೊ ಬೆಲೆ ಇದೀಗ 90 ರೂಪಾಯಿಗೆ ಏರಿಕೆಯಾಗಿದೆ. ಬೇರೆ ರಾಜ್ಯಗಳಲ್ಲಿ ಭಾರೀ ಮಳೆಯಾಗಿದ್ದು, ಟೊಮ್ಯಾಟೊಗೆ ಎಲ್ಲಿಲ್ಲದ ಡಿಮ್ಯಾಂಡ್ ಸಿಕ್ಕಿದೆ. ಹಾಗಾಗಿ ಟೊಮ್ಯಾಟೊ ಬೆಲೆ ಹೆಚ್ಚಳವಾಗಿದ್ದು, ಮಿಡಲ್ ಕ್ಲಾಸ್ ಜನರಿಗೆ ಹೊಡೆತ ಬಿದ್ದಿದೆ.