ಹೊಸದಿಗಂತ ವರದಿ,ಬಳ್ಳಾರಿ:
ವಿಧಾನ ಪರಿಷತ್ ಮಾಜಿ ಸಭಾಪತಿ, ಹಿರಿಯ ನ್ಯಾಯವಾದಿ ಎನ್.ತಿಪ್ಪಣ್ಣ ಅವರು ಶುಕ್ರವಾರ ನಿಧನರಾಗಿದ್ದು, ನಗರದ ಗಾಂಧಿನಗರ ಬಡಾವಣೆಯ ಅವರ ನಿವಾಸಕ್ಕೆ ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವ ವಿ.ಸೋಮಣ್ಣ ಅವರು ಸಂಜೆ ಭೇಟಿ ನೀಡಿ ಅಂತಿಮ ದರುಶನ ಪಡೆದರು.
ನಂತರ ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದ ತಿಪ್ಪಣ್ಣ ಅವರು, ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿ, ಸಮುದಾಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದರು. ಅತ್ಯಂತ ಸರಳ ಸಜ್ಜನಿಕೆ ಹೆಸರಾದ ನಾಯಕರು ತಿಪ್ಪಣ್ಣ ಅವರ ಅಗಲಿಕೆ ತುಂಬಾ ನೋವನ್ನುಂಟು ಮಾಡಿದೆ, ದೇವರು ಅವರ ಆತ್ಮಕ್ಕೆ ಶಾಂತಿ, ನೆಮ್ಮದಿ ನೀಡಲಿ, ಅವರ ಕುಟುಂಬದ ಸದಸ್ಯರಿಗೆ ದೇವರು ದುಖಃ ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಕೆಎಂಎಫ್ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಸಚಿವ ಈಶ್ವರ್ ಖಂಡ್ರೆ, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ ಇತರರಿದ್ದರು.