ಹೊಸದಿಗಂತ ವರದಿ ಮಂಗಳೂರು:
ಸದ್ಯ ಟೆಂಪಲ್ ರನ್ ಮಾಡುತ್ತಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಧರ್ಮಸ್ಥಳದ ನಂತರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ.
ಕುಕ್ಕೆಗೆ ಆಗಮಿಸಿದ ಹಿರಿಯ ನಾಯಕನಿಗೆ ಶಾಸಕಿ ಭಾಗೀರಥಿ ಮುರುಳ್ಯ ಪ್ರೀತಿಯ ಸ್ವಾಗತ ಕೋರಿದ್ದಾರೆ. ಹೂಗುಚ್ಛದೊಂದಿಗೆ ಮಾಜಿ ಸಚಿವ ಎಸ್. ಅಂಗಾರ ಅವರು ಬಿಎಸ್‌ವೈ ಅವರನ್ನು ಸ್ವಾಗತಿಸಿದ್ದಾರೆ.
ದೇವರ ದರುಶನದ ನಂತರ ಸುಳ್ಯದಲ್ಲಿ ಬಿಜೆಪಿ ಕಚೇರಿಯನ್ನು ಮಾಜಿ ಸಿಎಂ ಉದ್ಘಾಟಿಸಲಿದ್ದಾರೆ.