ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರನ್ನು ಗುಜರಾತ್‌ನ ರಾಜಪ್ರಭುತ್ವದ ರಾಜ್ಯವಾದ ಜಾಮ್‌ನಗರ ಎಂದೂ ಕರೆಯಲ್ಪಡುವ ನವನಗರದ ಮುಂದಿನ ಜಾಮ್ ಸಾಹೇಬ್ ಎಂದು ಘೋಷಿಸಲಾಗಿದೆ. ಈ ಘೋಷಣೆಯನ್ನು ನವನಗರದ ಮಹಾರಾಜ ಜಾಮ್ ಸಾಹೇಬ್ ಅವರು ಹೇಳಿಕೆಯಲ್ಲಿ ಖಚಿತಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿ ಜಾಮ್ ಸಾಹೇಬ್ ಪತ್ರ ಬರೆದಿದ್ದು, ದಸರಾ ದಿನದಂದು ಪಾಂಡವರು ವನವಾಸದಿಂದ ವಿಜಯಶಾಲಿಯಾಗಿ ಮರಳಿದರು. ಈ ಶುಭ ಸಂದರ್ಭದಲ್ಲಿ, ನನ್ನ ಸಂದಿಗ್ಧತೆ ಕೊನೆಗೊಂಡಿದೆ. ಅಜಯ್ ಜಡೇಜಾ ಅವರನ್ನು ನನ್ನ ಉತ್ತರಾಧಿಕಾರಿಯನ್ನಾಗಿ ಮಾಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಇದೀಗ 85 ವರ್ಷದ ಶತ್ರುಸಲ್ಯಸಿನ್ಜಿ ತಮಗೆ ಮಕ್ಕಳಿಲ್ಲದ ಕಾರಣ ಉತ್ತರಾಧಿಕಾರಿಯನ್ನು ಹೆಸರಿಬೇಕಾದ ಅನಿವಾರ್ಯತೆ ಎದುರಾಗಿದೆ. ಇದೇ ಕಾರಣಕ್ಕೆ ಅವರು ಈಗಾಗಲೇ ಖ್ಯಾತಿಗಳಿಸಿರುವ ಅಜಯ್ ಜಡೇಜಾ ಅವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದಾರೆ.