ಬಿಹಾರ ಚುನಾವಣೆಗೂ ಮುನ್ನ ಹೊಸ ಪಕ್ಷ ಘೋಷಿಸಿದ ಮಾಜಿ ಐಪಿಎಸ್ ಅಧಿಕಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮಾಜಿ ಐಪಿಎಸ್ ಅಧಿಕಾರಿ ಶಿವದೀಪ್ ವಾಮನ್‌ರಾವ್ ಲಾಂಡೆ ಅವರು ಮಂಗಳವಾರ ‘ಹಿಂದ್ ಸೇನಾ’ ಎಂಬ ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ.

ಬಿಹಾರ ಕೇಡರ್‌ನ 2006 ಬ್ಯಾಚ್ ಐಪಿಎಸ್ ಅಧಿಕಾರಿ ಲಾಂಡೆ, ತಮ್ಮ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದ್ದಾರೆ.

‘ಹಿಂದ್ ಸೇನಾ’ ರಾಷ್ಟ್ರೀಯತೆ, ಸಾಮಾಜಿಕ ಸೇವೆ ಮತ್ತು ಭಕ್ತಿಯ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ .”ನಮ್ಮ ಪಕ್ಷವು ‘ಜನತಾ ಕಿ ಆವಾಜ್'(ಜನರ ಧ್ವನಿ) ಆಗಲು ಪ್ರಯತ್ನಿಸುತ್ತದೆ” ಎಂದು ಲ್ಯಾಂಡೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸೆಪ್ಟೆಂಬರ್ 22, 2024 ರಂದು ಪೂರ್ಣಿಯಾದಲ್ಲಿ ಐಜಿಯಾಗಿ ನೇಮಕಗೊಂಡಾಗ ಲ್ಯಾಂಡೆ ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದರು ಮತ್ತು ಬಿಹಾರದಲ್ಲಿಯೇ ಉಳಿದು ಇಲ್ಲಿನ ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದಾಗಿಯೂ ತಿಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!