ಆರ್ ಎಸ್ ಎಸ್ ವಿಜಯದಶಮಿ ಕಾರ್ಯಕ್ರಮಕ್ಕೆ ಇಸ್ರೋ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ಮುಖ್ಯ ಅತಿಥಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಹಾರಾಷ್ಟ್ರದ ನಾಗ್ಪುರದಲ್ಲಿ ಅಕ್ಟೋಬರ್ 12 ರಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಾರ್ಷಿಕ ‘ವಿಜಯದಶಮಿ’ ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಈ ಕುರಿತು ಆರ್ ಎಸ್ ಎಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮೂಲಕ ಸೋಮವಾರ ಈ ಮಾಹಿತಿ ನೀಡಿದೆ.

ವಿಜಯದಶಮಿ ಉತ್ಸವ ಆರ್‌ಎಸ್‌ಎಸ್ ಕ್ಯಾಲೆಂಡರ್‌ನ ಪ್ರಮುಖ ಘಟನೆಗಳಲ್ಲಿ ಒಂದಾಗಿದ್ದು, ಮೋಹನ್ ಭಾಗವತ್ ಇದನ್ನು ಉದ್ದೇಶಿಸಿ ಮಾತನಾಡುತ್ತಾರೆ. ಅಕ್ಟೋಬರ್ 12 ರಂದು ಬೆಳಿಗ್ಗೆ 7:40 ಕ್ಕೆ ರೇಶಿಂಬಾಗ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಆರ್‌ಎಸ್‌ಎಸ್ ತಿಳಿಸಿದೆ.

https://x.com/RSSorg/status/1835558000737538506

ರಾಷ್ಟ್ರೀಯ ಸ್ವಯಂ ಸೇವಕದ ಸಂಸ್ಥಾಪನಾ ದಿನಾಚರಣೆಯೂ ಆಗಿರುವ ವಾರ್ಷಿಕ ವಿಜಯದಶಮಿ ಉತ್ಸವಕ್ಕೆ ಮಹತ್ವವಿದೆ. ಸಂಘ ಪರಿವಾರದ ಹಿರಿಯರು ಈ ಬಾರಿಯ ವಿಜಯದಶಮಿ ಉತ್ಸವದ ಮುಖ್ಯ ಅತಿಥಿಯಾಗಿ ಇಸ್ರೋ ಮಾಜಿ ಮುಖ್ಯಸ್ಥರನ್ನು ಆಹ್ವಾನಿಸಿರುವುದು ವಿಶೇಷ ಎನಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!