ಮೋದಿ ಗಾಯಬ್‌ ಎಂದು ಕಾಂಗ್ರೆಸ್‌ ಮಾಡಿದ ಪೋಸ್ಟ್‌ಗೆ ಪಾಕ್ ಮಾಜಿ ಸಚಿವರ ʼಲೈಕ್ಸ್‌👍🏻ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಂಚಿಕೊಂಡಿರುವ ಪೋಸ್ಟರ್ ವೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ.

‘ಬಂಧ್‌ಗಲಾ ಕುರ್ತಾ, ಚುಡಿದಾರ್ ಪೈಜಾಮಾ ಮತ್ತು ಕಪ್ಪು ಪಾದರಕ್ಷೆಯ ಮೇಲೆ ‘ಗಾಯಾಬ್’ ಎಂದು ಬರೆದಿರುವ ಪೋಸ್ಟರ್‌ ಅನ್ನು ಕಾಂಗ್ರೆಸ್ ಹಂಚಿಕೊಂಡಿದ್ದು, ಈ ಪೋಸ್ಟ್ ವಿವಾದವನ್ನು ಸೃಷ್ಟಿಸಿದೆ.

ಈ ಪೋಸ್ಟರ್‌ನಲ್ಲಿ ಯಾರ ಮುಖವೂ ಇಲ್ಲ. ಆದರೆ, ಫೋಟೋ ಶೈಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೋಲುವಂತಿದೆ.

ಕಾಂಗ್ರೆಸ್ ಮಾಡಿರುವ ಈ ಪೋಸ್ಟ್’ನ್ನು ಪಾಕಿಸ್ತಾನದ ಮಾಜಿ ಸಚಿವ ಶೇರ್ ಮಾಡಿದ್ದು, ‘ಕತ್ತೆಯ ತಲೆಯಿಂದ ಕೊಂಬುಗಳು ಕಾಣೆಯಾಗಿವೆ ಎಂದು ಕೇಳಿದ್ದೆ, ಆದರೆ ಇಲ್ಲಿ ಮೋದಿ ಕಾಣೆಯಾಗಿದ್ದಾರೆಂದು ಹೇಳಿದ್ದಾರೆ. ಅಲ್ಲದೆ, ಹ್ಯಾಷ್ ಟ್ಯಾಗ್ ನಲ್ಲಿ ನಾಟಿ ಕಾಂಗ್ರೆಸ್ ಎಂದು ಪೋಸ್ಟ್ ಮಾಡಿದ್ದಾರೆ.

ನಮ್ಮ ನಮ್ಮಲ್ಲೇ ಒಗ್ಗಟ್ಟಿಲ್ಲದೇ ಹೋದರೆ ಮೂರನೆಯವರು ಮಧ್ಯ ಬರುತ್ತಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!