ಪ್ರಧಾನಿಯನ್ನು ಭೇಟಿಯಾದ ಮಾಜಿ ಪ್ರಧಾನಿ, ಹೆಚ್‌ಡಿಕೆ: ಹಲವು ವಿಚಾರಗಳ ಕುರಿತು ಮಹತ್ವದ ಚರ್ಚೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.

ದೆಹಲಿಯ ಲೋಕ ಕಲ್ಯಾಣ್ ಮಾರ್ಗ್ ನಲ್ಲಿರುವ ಪ್ರಧಾನಿ ನಿವಾಸದಲ್ಲಿ ಉಭಯ ನಾಯಕರು ಭೇಟಿಯಾಗಿ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಈ ಮಾಹಿತಿಯನ್ನು ಸ್ವತಃ ಮೋದಿ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಲು ನನಗೆ ಸಂತೋಷವಾಯಿತು. ಅವರ ಬುದ್ಧಿವಂತಿಕೆ ಮತ್ತು ವಿವಿಧ ವಿಷಯಗಳ ಆಳವಾದ ದೃಷ್ಟಿಕೋನವು ಅಮೂಲ್ಯವಾದುದು ಎಂದು ಅವರು ಬರೆದಿದ್ದಾರೆ.

ಲೋಕಸಭೆ ಚುನಾವಣೆಯ ನಂತರ ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದರ ನೆಚ್ಚಿನ ಆಧ್ಯಾತ್ಮಿಕ ಸ್ಥಳವಾದ ‘ವಿವೇಕಾನಂದ ರಾಕ್ ಸ್ಮಾರಕ’ಕ್ಕೂ ಮೋದಿ ಭೇಟಿ ನೀಡಿದ್ದರು. ಈ ಸಂದರ್ಭವನ್ನು ಸ್ಮರಣಾರ್ಥವಾಗಿ ದೇವೇಗೌಡ ಅವರು ವಿವೇಕಾನಂದರ ಪ್ರತಿಮೆಯ ಮುಂದೆ ಮೋದಿ ಧ್ಯಾನ ಮಾಡುತ್ತಿರುವುದನ್ನು ತೋರಿಸುವ ಕಲಾಕೃತಿಯನ್ನು ಪ್ರಸ್ತುತಪಡಿಸಿದರು. ಮೋದಿಯವರು ಇದನ್ನು ಸ್ವೀಕರಿಸಿದ ಅವರು ಇದಕ್ಕಾಗಿ ನಾನು ಆಭಾರಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!