ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಮಾಜಿ ಸಚಿವೆ ಸ್ಮೃತಿ ಇರಾನಿ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. 2014ರಿಂದ 2024ರ ವರೆಗೆ ಅನೇಕ ಖಾತೆಯಲ್ಲಿ ಸ್ಮೃತಿ ಇರಾನಿ ಕೇಂದ್ರ ಸಚಿವರಾಗಿದ್ದರು. ಇದೀಗ ಸ್ಮೃತಿ ಮತ್ತೆ ಅಭಿನಯಕ್ಕೆ ಮರಳಿದ್ದಾರೆ. ಅವರಿಗೆ ಭಾರಿ ಜನಮನ್ನಣೆ ತಂದುಕೊಟ್ಟ ಧಾರಾವಾಹಿ ಮೂಲಕವೇ ಅಭಿನಯಕ್ಕೆ ಮರಳುತ್ತಿದ್ದಾರೆ.
ಕೇಂದ್ರ ಸಚಿವೆಯಾಗಿ ಅಬ್ಬರಿಸಿದ್ದ ಸ್ಮೃತಿ ಇರಾನಿ ಒಮ್ಮೆ ಸೋತಿದ್ದಕ್ಕೆ ಮತ್ತೆ ವಾಪಸ್ ಹೋದ್ರು ಎಂದು ಟೀಕೆ ಮಾಡಲಾಗುತ್ತಿದೆ. ಈ ಬಗ್ಗೆ ಮಾಜಿ ಸಚಿವೆ ಸ್ಮೃತಿ ಇರಾನಿ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದು, ‘ನಾನು ಫುಲ್‌ಟೈಂ ರಾಜಕಾರಣಿ, ಪಾರ್ಟ್ ಟೈಂ ನಟಿ ಅಷ್ಟೇ’ ಎಂದಿದ್ದಾರೆ.
ಸ್ಮೃತಿ ಇರಾನಿ ಧಾರಾವಾಹಿಗೆ ರೀ-ಎಂಟ್ರಿ ಕೊಟ್ಟಿದ್ದು ಅದರ ಪ್ರೋಮೋ ರಿಲೀಸ್ ಆಗಿದೆ. `ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ’ ಏಕ್ತಾ ಕಪೂರ್ ನಿರ್ಮಾಣದ ಸಾರ್ವಕಾಲಿಕ ಹಿಟ್ ಧಾರಾವಾಹಿಯಾಗಿತ್ತು. ಅದರ ಪಾರ್ಟ್ 2 ಬರ್ತಿರೋದೇ ವಿಶೇಷ. `ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ’2 ಪ್ರೋಮೋ ರಿಲೀಸ್ ಆಗಿದ್ದು, ಇದರ ಮೂಲಕ ಸ್ಮೃತಿ ಇರಾನಿ ಬಣ್ಣಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಧಾರಾವಾಹಿಯಲ್ಲಿ ಸೊಸೆ ಪಾತ್ರ ಮಾಡಿದ್ದ ಸ್ಮೃತಿ ಉತ್ತರ ಭಾರತದೆಲ್ಲೆಡೆ ಜನಪ್ರೀತಿ ಗಳಿಸಿದ್ದವರು. ಇದೀಗ ಅದೇ ಧಾರಾವಾಹಿ ಮೂಲಕ ಸ್ಮೃತಿ ಅಭಿನಯಕ್ಕೆ ಮರಳಿದ್ದಾರೆ. ಇಲ್ಲಿಗೆ ಸ್ಮೃತಿ ರಾಜಕೀಯ ಜೀವನ ಮುಕ್ತಾಯವಾಗಿದೆ ಎಂಬ ಟೀಕೆ ಬರುತ್ತಿದ್ದ ಬೆನ್ನಲ್ಲೇ ಸ್ಮೃತಿ ಇರಾನಿ ಅಭಿನಯ ಪಾರ್ಟ್ ಟೈಂ ಜಾಬ್ ಎನ್ನುವ ಮೂಲಕ ರಾಜಕೀಯ ತೊರೆದಿಲ್ಲ ಅನ್ನೋದಕ್ಕೆ ಸ್ಪಷ್ಟನೆ ನೀಡಿದ್ದಾರೆ.